ಕಾರವಾರ: ಕಳೆದ ಮೂರು ದಿನಗಳಿಂದ ನಗರದಲ್ಲಿ ನಗರಸಭೆಯಿಂದ ಕುಡಿಯುವ ನೀರು ಪೂರೈಕೆಯಾಗದೆ ಅನೇಕ ವಾರ್ಡ್ಗಳಲ್ಲಿ ನಿವಾಸಿಗಳು ತೊಂದರೆಗೊಳಗಾಗಿದ್ದು, ಕೂಡಲೇ ನೀರು ಪೂರೈಕೆ ಮಾಡಬೇಕು ಎಂದು ಶ್ರೀ ಶಿವಸೇನೆ ನಗರಸಭೆ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದೆ.
ಬಿರುಬೇಸಿಗೆಯಲ್ಲಿ ನೀರಿಗಾಗಿ ಹಾಹಾಕರವೆದ್ದಿರುವ ಸಂದರ್ಭದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೇ ಇರುವುದು ಖಂಡನೀಯ. ಈ ಬಗ್ಗೆ ಯಾವುದೇ ಸೂಚನೆಯನ್ನೂ ನಗರಸಭೆ ನೀಡದೆ ಇರುವುದು ನಗರಸಭೆಯ ಕರ್ತವ್ಯಪ್ರಜ್ಞೆಯನ್ನು ಪ್ರಶ್ನಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಗರದಲ್ಲಿ ಅನೇಕ ಅಪಾರ್ಟ್ಮೆಂಟ್ಗಳಿದ್ದು, ಕುಡಿಯುವ ನೀರಿಗಾಗಿ ನಗರಸಭೆ ಪೂರೈಸುವ ಕುಡಿಯುವ ನೀರನ್ನೇ ಅವಲಂಬಿಸಿಕೊoಡಿದ್ದಾರೆ. ಯಾವುದೇ ಮನ್ಸೂಚನೆ ನೀಡದೆ ಕುರಿಯುವ ನೀರು ಪೂರೈಕೆ ಮಾಡದೇ ಅಪಾರ್ಟ್ಮೆಂಟ್ ನಿವಾಸಿಗಳು ಕುಡಿಯವ ನೀರಿಗಾಗಿ ಊರೂರು ಅಲೆಯುವಂತಾಗಿದುದ, ಕೂಡಲೇ ನೀರು ಪೂರೈಕೆ ಮಾಡಬೇಕು ಶುಕ್ರವಾರ ನೀರು ಪೂರೈಕೆ ಮಾಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಶ್ರೀ ಶಿವಸೇನೆ ಎಚ್ಚರಿಕೆ ನೀಡಿದೆ. ಸೇನೆಯ ಪ್ರಮುಖರಾದ ರತನ್ ದುರ್ಗೆಕರ್, ಅರುಣ ವೆರ್ಣೇಕರ್ ಇದ್ದರು.