ಶಿರಸಿ: ತಂಬಾಕು ನಿಯಂತ್ರಣದ ಕಾರ್ಯಕ್ರಮದ ಅಡಿ ಜಿಲ್ಲೆಯ ಎಲ್ಲಾಕಡೆ ಏಕ ಕಾಲದಲ್ಲಿ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಂಡ ವಸೂಲಿ ಮಾಡಲಾಯಿತು.
ಅಂತೆಯೇ ಮೇ.24 ರಂದು ಶಿರಸಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಶಿರಸಿ ನಗರ ಭಾಗದಲ್ಲಿ ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಿನ್ನಲೆ ಅಂಗಡಿಗಳಿಗೆ ದಾಳಿ ಮಾಡಿ ದಂಡ ವಿಧಿಸಲಾಯಿತು. ಅಂತೂ 18 ಪ್ರಕರಣಗಳಲ್ಲಿ 4600 ರೂ. ಗಳ ದಂಡ ವಸೂಲಿ ಮಾಡಲಾಗಿದ್ದು, ತಂಬಾಕು ಉತ್ಪನ್ನದಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಿಕರಿಗೆ ಕರಪತ್ರವನ್ನು ನೀಡಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ತಹಶಿಲದಾರ ಶಿರಸಿ,, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ನಗರ ಸಭೆ ಶಿರಸಿ,ಸಮಾಜ ಕಲ್ಯಾಣ ಇಲಾಖೆ, ಆಹಾರ ಸುರಕ್ಷತಾಧಿಕಾರಿ, ಶಿಶು ಅಭಿವೃದ್ಧಿ ಇಲಾಖೆ,ಅಧಿಕಾರಿ/ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆಯವರು ಹಾಜರಿದ್ದರು.