ಕುಮಟಾ: ಶ್ರೀಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಭೈರುಂಬೆ ಗೆಳೆಯರ ಬಳಗ ಹಾಗೂ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಭೈರುಂಬೆಯ ಹುಳಗೋಳ ಸೇವಾ ಸಹಕಾರ ಸಂಘದ ಸಭಾಭವನದಲ್ಲಿ ಜೂ.3 ಮತ್ತು 4ರಂದು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜೂ.3ರ ಸಂಜೆ 5 ಗಂಟೆಗೆ ರಾಮಕೃಷ್ಣ ಹೆಗಡೆ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಹರಿಶ್ಚಂದ್ರ ಚರಿತ್ರೆ (ಕವಿ ತಿಮ್ಮಪ್ಪ ಹೆಗಡೆ) ನಡೆಯಲಿದೆ. ಈ ನಾಟಕದ ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಪ್ರಸನ್ನ ಭಟ್, ಭಾಳ್ಕಲ್ ಸಹಕರಿಸಲಿದ್ದಾರೆ. ಮದ್ದಲೆಯಲ್ಲಿ ಎ.ಪಿ. ಫಾಟಕ್, ಕಾರ್ಕಳ, ಅನಿರುದ್ಧ ವಗಾಸರ ಸಹಕರಿಸಲಿದ್ದಾರೆ. ಚಂಡೆಯಲ್ಲಿ ಗಣೇಶ ಗಾಂವ್ಕರ್, ಹಳವಳ್ಳಿ ಹಾಗೂ ಪ್ರಸನ್ನ ಹೆಗ್ಗಾರ್ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕೆ.ಜಿ. ಮಂಜುನಾಥ, ಶಿರಳಗಿ ತಿಮ್ಮಪ್ಪ ಹೆಗಡೆ, ಸಂಜಯ ಬೆಳೆಯೂರು, ಇಟಗಿ ಮಹಾಬಲೇಶ್ವರ, ಮೂರೂರು ನಾಗೇಂದ್ರ, ಕುಳಿಮನೆ ನಾಗೇಶ ಗೌಡ, ದೀಪಕ ಕುಂಕಿ, ಕುಮಾರಿ ಅಕ್ಷತಾ ರಾವ್, ಕುಮಾರಿ ನಮ್ರತಾ ರಾವ್, ಕುಮಾರಿ ಅಭಿಜ್ಞಾ ಹೆಗಡೆ ಸಹಕರಿಸಲಿದ್ದಾರೆ. ಸ್ತ್ರೀ ವೇಷಧಾರಿ ಪಾತ್ರಧಾರಿಯಾಗಿ ಶಶಿಕಾಂತ ಶೆಟ್ಟಿ, ಕಾರ್ಕಳ, ಸದಾಶಿವ ಭಟ್, ಮಲವಳ್ಳಿ, ನಾಗರಾಜ ಕುಂಕಿಪಾಲ್ ಹಾಗೂ ಹಾಸ್ಯ ಪಾತ್ರಧಾರಿಯಾಗಿ ಶ್ರೀಧರ ಹೆಗಡೆ, ಚಪ್ಪರಮನೆ ಸಹಕರಿಸಲಿದ್ದಾರೆ.
ಬಾಲಚಂದ್ರ ಹೆಗಡೆ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜೂ.4ರ ಸಂಜೆ 5 ಗಂಟೆಗೆ ಪೌರಾಣಿಕ ಪ್ರಸಂಗ ನಡೆಯಲಿದೆ. ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ರಾಮಕೃಷ್ಣ ಹೆಗಡೆ, ಹಿಲ್ಲೂರು, ಕುಮಾರಿ ಅಭಿಜ್ಞಾ ಹೆಗಡೆ, ಮದ್ದಲೆಯಲ್ಲಿ ಎ.ಪಿ. ಫಾಟಕ್, ಕಾರ್ಕಳ, ಅನಿರುದ್ಧ ವರ್ಗಾಸರ, ಚಂಡೆಯಲ್ಲಿ ಗಣೇಶ ಗಾಂವ್ಕರ್, ಹಳವಳ್ಳಿ ಹಾಗೂ ಪ್ರಸನ್ನ ಹೆಗ್ಗಾರ್ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚೆಟ್ಟಾಣಿ, ಕೆ.ಜಿ. ಮಂಜುನಾಥ, ಸಂಜಯ ಬೆಳೆಯೂರು, ಮೂರೂರು ನಾಗೇಂದ್ರ, ವಿಶ್ವನಾಥ ಹೆನ್ನಾಬೈಲು, ನಾಗೇಶ ಗೌಡ ಕುಳಿಮನೆ, ದೀಪಕ್ ಕುಂಕಿ, ಕುಮಾರಿ ಅಕ್ಷತಾ ರಾವ್, ಕುಮಾರಿ ನಮ್ರತಾ ರಾವ್, ಕುಮಾರಿ ಸಾನಿಧ್ಯ ಸಹಕರಿಸಲಿದ್ದಾರೆ. ಸ್ತ್ರೀ ವೇಷಧಾರಿ ಪಾತ್ರಧಾರಿಯಾಗಿ ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ, ಸದಾಶಿವ ಭಟ್, ಮಳವಳ್ಳಿ, ನಾಗರಾಜ ಕುಂಕಿಪಾಲ ಹಾಗೂ ಹಾಸ್ಯ ಪಾತ್ರಧಾರಿಯಾಗಿ ಶ್ರೀಧರ ಹೆಗಡೆ, ಚಪ್ಪರಮನೆ ಸಹಕರಿಸಲಿದ್ದಾರೆ.
ಎರಡು ದಿನಗಳು ನಡೆಯುವ ಈ ಕಾರ್ಯಕ್ರಮಕ್ಕೆ ವೇಷಭೂಷಣವನ್ನು ಉದಯ ಆಡುಕಳ ಒದಗಿಸಲಿದ್ದಾರೆ. ಧ್ವನಿ ಮತ್ತು ಬೆಳಕನ್ನು ಕಾರ್ತಿಕ್ ಸೌಂಡ್ಸ್, ಶಿರಸಿ ಇವರು ನೀಡಲಿದ್ದಾರೆ. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮಕ್ಕೆ ಯಕ್ಷಗಾನ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಸಂಘಟಕರು ಕೋರಿದ್ದಾರೆ.