Slide
Slide
Slide
previous arrow
next arrow

ಸೋಲಿನಿಂದ ವಿಚಲಿತರಾಗಬೇಕಿಲ್ಲ, ಸಂಘಟನೆ ಬಲಪಡಿಸೋಣ: ರೂಪಾಲಿ ನಾಯ್ಕ

300x250 AD

ಕಾರವಾರ: ಚುನಾವಣೆ ಅಂದಾಗ ಸೋಲು ಗೆಲುವು ಸಹಜ. ಆದರೆ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಜನತೆ ಹಗಲಿರುಳು ದುಡಿದಿರುವುದು ನನಗೆ ಹೃದಯತುಂಬಿ ಬಂದಿದೆ. ಸೋಲಿನಿಂದ ಯಾರೂ ಅಧೀರರಾಗಬೇಕಿಲ್ಲ ಎಂದು ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅಪಾರ ಕಾರ್ಯಕರ್ತರು, ಅಭಿಮಾನಿಗಳು, ಜನತೆ ತಮ್ಮ ನೋವನ್ನು ಹಂಚಿಕೊ0ಡಿದ್ದು, ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಸೋಲಿನಿಂದ ಯಾವೊಬ್ಬ ಕಾರ್ಯಕರ್ತರೂ ವಿಚಲಿತರಾಗಬೇಕಿಲ್ಲ. ಹತಾಶರಾಗಬೇಕಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಯೊಂದಿಗೆ ಸದಾ ನಾನು ಇದ್ದೇನೆ. ಕಾರ್ಯಕರ್ತರ ಹಾಗೂ ಎಲ್ಲರ ಶ್ರಮದಿಂದಾಗಿಯೇ ನಮ್ಮ ಭಾರತೀಯ ಜನತಾ ಪಾರ್ಟಿ ಕ್ಷೇತ್ರದಲ್ಲಿ ಇಷ್ಟೊಂದು ಬಲಿಷ್ಠವಾಗಿ ಬೆಳೆದುನಿಂತಿದೆ. ಮುಂದೆಯೂ ಕಾರ್ಯಕರ್ತರೊಂದಿಗೆ ಸೇರಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಸದ್ಯದಲ್ಲೇ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ವಿಚಾರ ವಿನಿಮಯ ನಡೆಸಲು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

300x250 AD

ಪಕ್ಷ ತಾಯಿ ಇದ್ದಂತೆ. ಪಕ್ಷ ನಿಷ್ಠರಾದ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಪಕ್ಷ ಅಗಾಧವಾಗಿ ಬೆಳೆದುನಿಂತಿದೆ. ಮುಂಬರುವ ದಿನಗಳಲ್ಲಿ ಎಲ್ಲರೂ ಸೇರಿ ಪಕ್ಷವನ್ನು ಮತ್ತಷ್ಟು, ಇನ್ನಷ್ಟು ಬೆಳೆಸೋಣ. ಯಾವುದೇ ಕಾರಣಕ್ಕೂ ಧೃತಿಗೆಡುವ ಅವಶ್ಯಕತೆ ಇಲ್ಲ. ಇದು ಸೋಲಲ್ಲ ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಯ ಗೆಲುವು ಎಂದು ಅವರು ಪ್ರಕಟಣೆಯ ಮೂಲಕ ಕಾರ್ಯಕರ್ತರು, ಅಭಿಮಾನಿಗಳು, ಜನತೆಯಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top