ಶಿರಸಿ: ಚುನಾವಣೆಯಲ್ಲಿ ಸ್ಪರ್ಧಿಸಿ 9138 ಮತಗಳನ್ನು ಪಡೆದು ಜನ ಕೊಟ್ಟಂತಹ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಅದೇ ರೀತಿಯಾಗಿ ನಾನು ಇಲ್ಲಿಯವರೆಗೆ ಮಾಡುತ್ತಾ ಬಂದ0ತಹ ಜನಸೇವೆ ಮುಂದುವರಿಸುತ್ತೇನೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಪಕ್ಷ ಸೋತಿರಬಹುದು, ಆದರೆ ನಾನು ಸೋಲಲ್ಲಿಲ ಎಂದು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ಪರಾಜಿತ ಅಭ್ಯರ್ಥಿ ಉಪೇಂದ್ರ ಪೈ ತಿಳಿಸಿದ್ದಾರೆ.
ನನಗೆ ಬಹಳ ಅವಕಾಶಗಳು ಇವೆ. ಆದರೆ ನಾನು ನಮ್ಮ ಈ ಶಿರಸಿ ಜಿಲ್ಲೆ ಆಗುವರೆಗು ನನ್ನ ಈ ಹೋರಾಟ ನಿಲ್ಲಿಸುವುದಿಲ್ಲ. ಶಿರಸಿ ಜಿಲ್ಲೆಯನ್ನಾಗಿ ಮಾಡಬೇಕು ಅನ್ನೋ ಒಂದು ಉದ್ದೇಶಕ್ಕೆ ಈ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆದರೆ ಜನ ಕೊಟ್ಟಂತಹ ತೀರ್ಮಾನಕ್ಕೆ ನಾನು ಬದ್ಧ. ನನ್ನ ಪರವಾಗಿ ಹಗಲಿರುಳು ಶ್ರಮಿಸಿ ಕೆಲಸ ಮಾಡಿದ ನನ್ನ ಎಲ್ಲ ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ, ಹಿರಿಯರಿಗೆ ಮತ್ತು ಮತ ನೀಡಿದಂತಹ ಮತದಾರ ಬಂಧುಗಳಿಗೆ ಹೃದಯಪೂರ್ವಕ ವಂದನೆಗಳು ಸಲ್ಲಿಸುತ್ತೇನೆ ಎಂದಿದ್ದಾರೆ.
ಸುಳ್ಳು ಅಪಪ್ರಚಾರ ಮಾಡಿದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷದ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ದೇವರು ಒಳ್ಳೆಯ ಬುದ್ಧಿ ಕೊಡಲಿ. ಹಾಗಾಗಿ ಎರಡು ಪಕ್ಷದ ಕಾರ್ಯಕರ್ತರ ಅಪಪ್ರಚಾರವೇ ಈ ಒಂದು ಸೋಲಿಗೆ ಕಾರಣ. ಪಕ್ಷ ಸೋತಿರಬಹುದು, ಆದರೆ ನಾನು ಸೋತಿಲ್ಲ. ಮುಂದಿನ ದಿನಗಳಲ್ಲು ಕೂಡ ಜನರೊಟ್ಟಿಗಿದ್ದು ಸೇವೆ ಮಾಡುತ್ತೆನೆಂದು ತಿಳಿಸಿದ್ದಾರೆ.