ಶಿರಸಿ: ಇಕೋ ಕೇರ್ ಸಂಸ್ಥೆಯ ವತಿಯಿಂದ ಪರಿಸರ, ಔಷಧಿ ಸಸ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಕುರಿತು ಅಧ್ಯಯನ ಪ್ರವಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಮೇ.14ರಂದು ನಡೆಯಿತು.
ಇಲ್ಲಿನ ಮಧುಕೇಶ್ವರ್ ಹೆಗಡೆ ಜೇನು ಸಾಕಾಣಿಕೆ, ಔಷಧಿ ಸಸ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಮುಂಬರುವ ಪರಿಸರ ದಿನಾಚರಣೆಯ ಅಂಗವಾಗಿ ಇಕೋ ಕೇರ್ ಸಂಸ್ಥೆ ಆಯೋಜಿಸಬೇಕಾದ ಕಾರ್ಯಕ್ರಮಗಳ ಕುರಿತು ಪೂರ್ವ ತಯಾರಿಯಾಗಿ ಈ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಇಕೋ ಕೇರ್ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಭೋವಿ, ಜಗದೀಶ್ ನಾಯ್ಕ್ ಹಾಗು ರಮೇಶ್ ನಾಯ್ಕ್ ಹಾಜರಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ(ರಿ), ಜಿಲ್ಲಾ ಶಾಖೆ : ಉತ್ತರ ಕನ್ನಡದ ಅಧ್ಯಕ್ಷ ಮಹೇಶ್ ಡಿ.ನಾಯಕ್ ಮತ್ತು ಪುಂಡಲೀಕ್ ಸಿರಸಿಕರ್ ಈ ಸಂದರ್ಭದಲ್ಲಿ ಹಾಜರಿದ್ದರು.