ಶಿರಸಿ: ಮಾರ್ಚನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯು ಶೇ. 92.05% ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮೆರೆದಿದೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸತತ ಎರಡನೇ ವರ್ಷ ಶೇ. 100% ಫಲಿತಾಂಶ ದಾಖಲಾಗಿದೆ. ಶಾಲೆಯ ಗುಣಾತ್ಮಕ ಫಲಿತಾಂಶ 80.22% ಆಗಿದ್ದು “A” ಗ್ರೇಡ್ ಗಳಿಸಿದೆ.
ಕು. ಪವನ ನಾಯ್ಕ ಮತ್ತು ಕು. ಗುರುರಾಜ ಡಿ. ದಾಳೇರ್ 92.48% ಪಡೆದು ಪ್ರಥಮ ಸ್ಥಾನ, ಕು. ಭಾವನಾ ಎಂ. ಜಿನ್ನೂರು 91.68% ಅಂಕಗಳಿಸಿ ದ್ವಿತೀಯ ಸ್ಥಾನ, ಹಾಗೂ ಕು. ಕವಿತಾ ಎಸ್. ಮರಾಠಿ 91.20% ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದು, ಶಾಲೆಯ ಈ ಸಾಧನೆಗೆ ಶಾಲಾಭಿವೃದ್ಧಿ ಸಮಿತಿ, ಪಾಲಕರು, ಶ್ರಮವಹಿಸಿದ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.