ಯಲ್ಲಾಪುರ: ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬಿದ್ದಿದ್ದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಜಯಭೇರಿ ಬಾರಿಸಿದ್ದಾರೆ.
ಗೆಲುವಿನ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಿದ ಅವರು, ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಯಲ್ಲಾಪುರ- ಮುಂಡಗೋಡ- ಬನವಾಸಿ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಅಭೂತಪೂರ್ವ ಜಯಭೇರಿ ಸಾಧಿಸಲು ಕಾರಣರಾದ ದೈವ ದುರ್ಲಭ ಸ್ಟಾರ್ ಪ್ರಚಾರಕರು, ಕಾರ್ಯಕರ್ತರು, ಮುಖಂಡರು, ಮತಬಾಂಧವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನೀವು ನೀಡಿದ ಈ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳಲ್ಲಿನ ಕ್ಷೇತ್ರದ ಆರೋಗ್ಯ, ನೀರಾವರಿ, ಶಿಕ್ಷಣ, ವಸತಿ, ಔದ್ಯೋಗಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತೇನೆ ಎಂದು ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.