Slide
Slide
Slide
previous arrow
next arrow

ಜಾತಿ, ಧರ್ಮದ ಹೆಸರಿನಲ್ಲಿ ಎಂದೂ ರಾಜಕಾರಣ ಮಾಡಬಾರದು: ಆರ್.ವಿ.ಡಿ.

300x250 AD

ದಾಂಡೇಲಿ: ಇಂದು ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಜಾತಿ, ಧರ್ಮಗಳ ನಡುವೆ ವಿಷಬೀಜವನ್ನು ಬಿತ್ತಿ ಸಮಾಜದ ನೆಮ್ಮದಿಯನ್ನು ಕೆಡಿಸುವಂತಹ ವಾತವರಣ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಎಂದೂ ರಾಜಕಾರಣ ಮಾಡಬಾರದು. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಕೆಂದು ಆರ್.ವಿ. ದೇಶಪಾಂಡೆ ಕರೆ ನೀಡಿದರು.

ಅವರು ನಗರದ ಕೋಮಾರಪಂತ ಸಮಾಜ ಭವನದಲ್ಲಿ ನಡೆದ ನಗರದ ವೀರಶೈವ ಲಿಂಗಾಯತ ಸಮಾಜ ಬಾಂಧವರ ಜೊತೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಾನು ಎಲ್ಲ ಜಾತಿ, ಮತ, ಧರ್ಮದವರನ್ನು ನಾವೆಲ್ಲರೂ ಒಂದೇ ಎಂಬ ಭಾತೃತ್ವದಡಿ ನೋಡಿಕೊಂಡು ಬಂದವನು. ಜಾತಿಯ ಮೇಲೆ ರಾಜಕಾರಣ ಮಾಡುತ್ತಿದ್ದಲ್ಲಿ ನಾನು 8 ಬಾರಿ ಶಾಸಕನಾಗಿ ಆಯ್ಕೆಯಾಗುತ್ತಿರಲಿಲ್ಲ. ರಾಜಕಾರಣಿಗಳಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿಯಿರಬೇಕು, ಕ್ಷೇತ್ರದ ಪ್ರಗತಿಯ ಮುನ್ನೋಟವಿರಬೇಕೆಂದು ಹೇಳಿದ ದೇಶಪಾಂಡೆ, ನಗರದ ವೀರಶೈವ ಸಮಾಜದ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇನೆ ಮತ್ತು ಸಾಕಷ್ಟು ಅನುದಾನವನ್ನು ತಂದುಕೊಟ್ಟಿದ್ದೇನೆ ಎಂಬ ನಂಬಿಕೆ ನನಗಿದೆ. ನಗರದ ವೀರಶೈವಾ ಸಮಾಜ ಬಾಂಧವರು ಶಾಂತಿಪ್ರಿಯರು. ಧಾರ್ಮಿಕ ಆಚರಣೆಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವವರು. ಬಸವ ತತ್ವವನ್ನು ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವವರು ಎಂದರು.

ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ಚುನಾವಣೆಯ ನೆಪದಲ್ಲಿ ನಮ್ಮ ನಮ್ಮಲ್ಲಿ ಒಡಕನ್ನು ತರುವಂತಹ ಕೆಲಸವನ್ನು ಯಾರು ಮಾಡದೇ ಬಸವಣ್ಣನವರ ಸರ್ವ ಸಮಾನತೆಯ ತತ್ವವನ್ನು ನಾವು ನೀವೆಲ್ಲರೂ ಮೈಗೂಡಿಸಿ ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಎಲ್ಲರು ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಎಸ್.ಎಸ್. ಪೂಜಾರ್, ವಕೀಲ ಆರ್.ವಿ.ಗಡೆಪ್ಪನವರ ಸಂದರ್ಭೋಚಿತವಾಗಿ ಮಾತನಾಡಿ ವೀರಶೈವಾ ಸಮಾಜದ ಮನವಿಗೆ ಆರ್.ವಿ.ದೇಶಪಾಂಡೆಯವರು ಸ್ಪಂದಿಸಿ, ಯಾತ್ರಿ ನಿವಾಸ ಸೇರಿದಂತೆ ಸಾಕಷ್ಟು ಅನುದಾನ ತಂದಿರುವುದನ್ನು ವೀರಶೈವಾ ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.

300x250 AD

ವೇದಿಕೆಯಲ್ಲಿ ಪ್ರಸಾದ್ ದೇಶಪಾಂಡೆ, ಸಮಾಜದ ಹಿರಿಯರಾದ ಡಾ.ಎನ್.ಜಿ.ಬ್ಯಾಕೋಡ್, ಸಮಾಜದ ಪ್ರಮುಖರುಗಳಾದ ಸಿ.ಎಸ್.ವಸ್ತçದ್, ಸಿದ್ದಯ್ಯ ಕುಮಾರಮಠ, ಯು.ಎಸ್.ಪಾಟೀಲ್, ಆದಪ್ಪ ಕವಡಿಮಟ್ಟಿ, ಶಿವಾಲೀಲಾ ಚೌಡಿ, ಎಂ.ಬಿ.ಅಪ್ಪನಗೌಡರ್, ಅಡಿವೆಪ್ಪ ಭದ್ರಕಾಳಿ, ವೀರೇಶ್ ಯರಗೇರಿ, ನ್ಯಾಯವಾದಿ ಕವಿತಾ ಗಡೆಪ್ಪನವರ ಮೊದಲಾದವರು ಉಪಸ್ಥಿತರಿದ್ದರು. ನಗರಸಭಾ ಸದಸ್ಯರಾದ ನಂದೀಶ್ ಮುಂಗರವಾಡಿಯವರು ಸ್ವಾಗತಿಸಿ, ವಂದಿಸಿ, ಕಾರ‍್ಯಕ್ರಮವನ್ನು ನಿರೂಪಿಸಿದರು. ಕರ‍್ಯಕ್ರಮವನ್ನು ಅಡಿವೆಪ್ಪ ಭದ್ರಕಾಳಿ, ವೀರೇಶ್ ಯರಗೇರಿ, ನಂದೀಶ್ ಮುಂಗರವಾಡಿ, ಶಿವಾಲೀಲಾ ಚೌಡಿ, ವಸಂತ, ಶರಣಪ್ಪ ನರೇಗಲ್, ಕವಿತಾ ಗಡೆಪ್ಪನವರ್ ಮೊದಲಾದವರು ಸೇರಿ ಸಂಘಟಿಸಿದ್ದರು.

Share This
300x250 AD
300x250 AD
300x250 AD
Back to top