ಶಿರಸಿ: ಇಲ್ಲಿನ ಚಂದನ ಪಿಯು ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀ ಕಿಶೋರ್ ಹೆಗಡೆ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್ ಡಿ ಪ್ರದಾನ ಮಾಡಿದೆ.
ಡಿಜಿಟಲ್ ಇಮೇಜ್ ಡಿನೋಯ್ಸಿಂಗ ಎಂಡ್ ಸೆಗ್ಮೆಂಟೇಶನ್ ಯೂಸಿಂಗ್ ಟೈಂ ಫ್ರಿಕ್ವೆನ್ಸಿ ಟೆಕ್ನಿಕ್ಸ ವಿಷಯವಾಗಿ ಕುವೆಂಪು ವಿವಿಯ ಎಲೆಕ್ಟ್ರಾನಿಕ್ಸ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ಜಗದಾಳೆ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್ ಡಿ ನೀಡಲಾಗಿದೆ.
ಎಂಎಸ್ಸಿ, ಎಂಬಿಎ ಹಾಗೂ ಎಂಟೆಕ್ ಪದವೀಧರೆಯಾಗಿದ್ದು, ಮೊದಲ ಪ್ರಯತ್ನದಲ್ಲೇ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದು ಉಲ್ಲೇಖನೀಯ.