ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಪ್ರಿಲ್ 20,2023 ರ ಗುರುವಾರದಂದು ಐವರು ರಾಷ್ಟ್ರೀಯ ರೈಫಲ್ಸ್ ಯೋಧರು ಹುತಾತ್ಮರಾಗಿದ್ದಾರೆ. ಭಯೋತ್ಪಾದಕರು ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದಾಗ ಐವರು ಯೋಧರು ಹುತಾತ್ಮರಾಗಿದ್ದಾರೆ.
https://www.facebook.com/watch/?v=626200712756326
ದಾಳಿಯಲ್ಲಿ ಹುತಾತ್ಮರಾದ ಸೇನಾ ಯೋಧರು ಸಂಗಿಯೋಟ್ನಲ್ಲಿ ರಾಷ್ಟ್ರೀಯ ರೈಫಲ್ಸ್ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ತರಕಾರಿ ಮತ್ತಿತರ ಸಾಮಗ್ರಿಗಳನ್ನು ಪಡೆದು ಹಿಂತಿರುಗುತ್ತಿದ್ದರು ಎಂದು ವರದಿಯಾಗಿದೆ. ಇಫ್ತಾರ್ ಕೂಟಕ್ಕೆ ಸಮೀಪದ ಗ್ರಾಮಗಳ ಸ್ಥಳೀಯ ಮುಖಂಡರನ್ನೂ ಆಹ್ವಾನಿಸಲಾಗಿತ್ತು ಎಂದು ತಿಳಿದು ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಸೇನೆಯು ಇಫ್ತಾರ್ ಆಯೋಜಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಭಯೋತ್ಪಾದಕರು ಸೇನಾ ಟ್ರಕ್ ಮೇಲೆ ದಾಳಿ ಮಾಡಿದ್ದಾರೆ. ಈ ಸೇನಾ ಇಫ್ತಾರ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಸ್ಥಳೀಯರು ಆಗಾಗ್ಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಾರೆ ಎಂದು ಶಂಕಿಸಲಾಗಿದೆ.
ಏತನ್ಮಧ್ಯೆ, ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ರೈಫಲ್ಸ್ ಜವಾನರ ಚಿತ್ರಗಳು ಮತ್ತು ವಿವರಗಳನ್ನು ಸೇನೆ ಬಿಡುಗಡೆ ಮಾಡಿದೆ. ಭಯೋತ್ಪಾದಕರ ದಾಳಿಯಲ್ಲಿ ಹವಾಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಾಶಿಶ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲವಂತ್ ಸಿಂಗ್, ಸಿಪಾಯಿ ಹರ್ಕ್ರಿಶನ್ ಸಿಂಗ್ ಮತ್ತು ಸಿಪಾಯಿ ಸೇವಕ್ ಸಿಂಗ್ ಹುತಾತ್ಮರಾಗಿದ್ದರು.
“#ArmyCdrNC & all ranks of #NorthernCommand #salute the #supreme #sacrifice of Havildar Mandeep Singh, Lance Naik Debashish Baswal, Lance Naik Kulwant Singh, Sepoy Harkrishan Singh & Sepoy Sewak Singh of #RashtriyaRifles in #Poonch on 20 April 23. Rest in Peace,” ಎಂದು ಭಾರತೀಯ ಸೇನೆಯ ಉತ್ತರ ಕಮಾಂಡ್ ಟ್ವೀಟ್ ಮಾಡಿದೆ.
ವರದಿಯ ಪ್ರಕಾರ, ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪು ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಕೃಪೆ: http://opindia.com