Slide
Slide
Slide
previous arrow
next arrow

ಎಲ್ಲಾ ಸಮುದಾಯಗಳನ್ನು ಗೌರವಿಸುವ ಮೋದಿ ಬಗ್ಗೆ ಪಾಕಿಸ್ಥಾನಿಯರ ಮೆಚ್ಚುಗೆ

300x250 AD

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ವಿವಿಧ ಧಾರ್ಮಿಕ ಸಮುದಾಯಗಳ ಸದಸ್ಯರು ಮೆಲ್ಬೋರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ “ಎಲ್ಲಾ ಸಮುದಾಯಗಳನ್ನು ಗೌರವಿಸುವ ಸಾಮರ್ಥ್ಯ” ವನ್ನು ಶ್ಲಾಘಿಸಿದರು. ‌

NID ಫೌಂಡೇಶನ್‌ನ ಉಪಕ್ರಮವಾದ ವಿಶ್ವ ಸದ್ಭಾವನಾ ಕಾರ್ಯಕ್ರಮವನ್ನು ಏಪ್ರಿಲ್ 23 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಬಂಜಿಲ್ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿತ್ತು. ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ವಿದ್ವಾಂಸರು, ಬೋಧಕರು ಮತ್ತು ಸಂಶೋಧಕರು ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನದ (IMF), NID ಫೌಂಡೇಶನ್ ನವದೆಹಲಿ, ಮತ್ತು ನಾಮಧಾರಿ ಸಿಖ್ ಸೊಸೈಟಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಹಮದಿಯ ಮುಸ್ಲಿಂ ಸಮುದಾಯದ ಪಾಕಿಸ್ತಾನದ ಲಾಹೋರ್ ಮೂಲದ ಡಾ. ತರೀಕ್ ಭಟ್ ಅವರು ಮೋದಿಯನ್ನು ಹಾಡಿ ಹೊಗಳಿದ್ದು, ಶಾಂತಿ ಮತ್ತು ಸೌಹಾರ್ದತೆಗಾಗಿ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಜೊತೆ ಬೆರೆಯುವಂತೆ ಮಾಡುವಲ್ಲಿ ಪ್ರಧಾನಿ ಮೋದಿ ಪ್ರೇರೇಪಣೆ ನೀಡುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಚರಿಷ್ಮಾ ಮೋದಿ ಅವರ ಬಳಿ ಇದೆ ಎಂದಿದ್ದಾರೆ.

300x250 AD

Share This
300x250 AD
300x250 AD
300x250 AD
Back to top