ಕುಮಟಾ: ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದೆ. ಪೈಪ್‌ಲೈನ್ ಮೂಲಕ ನೀರನ್ನು ಪೂರೈಸಿದರೂ ಅವಶ್ಯಕತೆಗೆ ತಕ್ಕ ನೀರು ಪೂರೈಕೆಗೂ ಸಾಧ್ಯವಾಗುತ್ತಿಲ್ಲ.
ಸ್ವಂತ ಬಾವಿಯಿರುವ ಮನೆಗಳಲ್ಲೂ ಕೂಡ ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿ, ಸೇವನೆಗೆ ಸಾಧ್ಯವಾಗದೇ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಗಂಗಾವಳಿ ಕುಡಿಯುವ ನೀರಿನ ಮರಕಾಲ್ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿದ್ದರೂ ಗಂಗಾವಳಿ ನದಿ ಮೂಲವೇ ಏರಿಕೆಯ ತಾಪಮಾನದಿಂದಾಗಿ ನೀರು ಬತ್ತುತ್ತಿದೆ. ಬಹುತೇಕ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.