eUK ವಿಶೇಷ: “ಅಭಿಪ್ರಾಯ ರೂಪಿಸುವಿಕೆ ನರೇಟಿವ್ ಬಿಲ್ಡಿಂಗ್ “
ಅರ್ಥತ್ ಯಾವುದು ಇಲ್ಲವೋ ಅದನ್ನು ಇದೆ ಎಂದು ಬಿಂಬಿಸುವುದು.
ಬಾಲಿವುಡ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದು ಜನರ ಮೇಲೆ ಬೀರುವ ಪ್ರಭಾವ ಎಂಥದ್ದು ಎಂದು ನಿಮಗೆ ಅರಿವಿದೆ. ಅಂತಹ ಚಿತ್ರ ರಂಗವನ್ನು ಕೊಂಚ ಗಮನಿಸಿ.
ಹಿಂದಿ ಚಿತ್ರರಂಗದಲ್ಲಿ ಮೊಘಲ್ ಅಝಂ, ಜೋಧಾ ಅಕ್ಬರ್ ನಂತಹ ಚಿತ್ರಗಳು ಆಗಾಗ್ಗೆ ಬಂದವು. ಇವು ನಮ್ಮ ಇತಿಹಾಸದ ಮೇಲಣ ನಂಬಿಕೆಯನ್ನು ತಿರುಚಿದವು. ಇದರ ಹಿಂದಿನ ಕಾರಣ ಬೇರೆಯದದ್ದು.
ಒಟ್ಟಾರೆ ನಿಮಗೆ ಹೇಳಬೇಕೆಂದರೆ ಸಮಸ್ಯೆ ಇರುವುದು ಇದರ ಹಿಂದಿರುವವರ ವಂಶವಾಹಿನಿಯಲ್ಲಿಯೇ ಎಂಬುದನ್ನು ಜನರು ಅರಿಯಬೇಕಿದೆ. ಇದೊಂದು ವ್ಯವಸ್ಥಿತ ಹುನ್ನಾರವೇ ಆಗಿದೆ.
2020ರಲ್ಲಿ ಓಟಿಟಿಯಲ್ಲಿ ‘ಜಾಮ್ ತಾಳಾ ಸಬ್ ಕಾ ನಂಬರ್ ಆಯೆಗಾ’ ಎಂಬ ವೆಬ್ ಸಿರೀಸ್ ಬಿಡುಗಡೆ ಆಯಿತು. ಇದರಲ್ಲಿನ ಬಹುತೇಕ ಪಾತ್ರಗಳು ಹಿಂದುಗಳಾಗಿದ್ದವು. ಆದಾಗ್ಯು ನ್ಯಾಯಪರವಾಗಿ ಹೋರಾಡುವ ಓರ್ವ ಮುಸ್ಲಿಂ ಪತ್ರಕರ್ತನ ಪಾತ್ರ ಸೇರಿಸಲಾಗಿತ್ತು. 2021ರಲ್ಲಿ ಸೈಬರ್ ಕ್ರೈಮ್ ಕಾರ್ಯಾಚರಣೆ ಅಂಗವಾಗಿ ಓರಿಸಾದ ಜಾಮ್ತಾಳದಲ್ಲಿ ಹಿಡಿದ ಸದಸ್ಯರೆಲ್ಲರೂ ಮುಸ್ಲಿಮರಾಗಿದ್ದರು. ಮುಖ್ಯಸ್ಥನ ಹೆಸರು ಅಲ್ತಾಫ್ ಅನ್ಸಾರಿ ಮತ್ತು ಗುಲಾಬ್ ಅನ್ಸಾರಿ. ಈ ವಿಷಯ ವಸ್ತುವಾಧರಿಸಿದ ಚಿತ್ರದಲ್ಲಿ ಮಾತ್ರ ಪಾತ್ರಧಾರಿಗಳೆಲ್ಲ ಹಿಂದುವಾಗಿದ್ದರು ಮತ್ತು ಇದು ಹಿಂದುಗಳೇ ತಪ್ಪು ಮಾಡುತ್ತಾರೆ ಮುಸ್ಲಿಂರು ಅದರ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಬಿಂಬಿಸುವಂಥದಾಗಿತ್ತು. ಇದ್ದದ್ದನ್ನು ಇಲ್ಲ ಎಂದು, ಇಲ್ಲವಾಗಿದ್ದನ್ನು ಹೌದು ಎಂದು ತದ್ವಿರುದ್ಧವಾಗಿ ನಂಬಿಕೆ ಬೆಳೆಸುವುದನ್ನು ಅಭಿಪ್ರಾಯ ರೂಪಿಸುವುದು ಎನ್ನುತ್ತಾರೆ. ಜನರನ್ನು ಮಂಗರಾಗಿಸುವ ಕಲೆ ಇದು.
ಬಾಲಿವುಡ್ ಚಿತ್ರಗಳಲ್ಲಿ ಬಹಳ ನಾಜೂಕಾಗಿ ಉದ್ದೇಶಪೂರ್ವಕವಾಗಿ ಈ ತಂತ್ರ ಹೆಣೆಯಲಾಗುತ್ತದೆ. ಯಾವುದು ವಾಸ್ತವದಲ್ಲಿ ಇದೆ ಎಂಬುದನ್ನು ಹೇಳದೇ,ಯಾವು ಸಂಗತಿ ಇಲ್ಲವೋ ಅದನ್ನು ತೋರಿಸಿ ತಲೆಯಲ್ಲಿ ಅಚ್ಚಾಗುವಂತರ ಮಾಡಲಾಗುತ್ತದೆ.ಈ ಕೆಲಸ ಎಡಪಂಥೀಯ ಸೆಕ್ಯುಲರ್ ಕಟ್ಟರ್ ವಾದಿಗಳು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಚಿತ್ರ ಜಗತ್ತನ್ನು ಈ ವಿಚಾರ ಅದ್ಯಾವಾಗಲೋ ಆಕ್ರಮಿಸಿಕೊಂಡಿದೆ.
ಮುಘಲ್ ಎ ಅಜಂ ನೋಡದವರಾರು?
ಆ ಚಿತ್ರ ನೋಡಿದಾಗ ಸಲೀಂ ಅನಾರ್ಕಲಿ ಅಮರ ಪ್ರೇಮಿಗಳೆಂದು ಬಿಂಬಿಸಲಾಗಿದೆ. ಆದರೆ ಮುಘಲ್ ವಂಶದ ಅಸಲಿ ಕಥೆಯೇ ಬೇರೆ ಇದೆ ಎಂಬುದು ಅದೆಷ್ಟು ಜನಕ್ಕೆ ಗೊತ್ತು ಹೇಳಿ.ಅಕ್ಬರ್ ಆದಿಯಾಗಿ ಎಲ್ಲಾ ಉದಾರಿಗಳು, ಮುಗ್ಧರು , ಧರ್ಮಭೀರುಗಳು, ವೀರಯೋಧರು, ಜಾತ್ಯತೀತವಾದಿಗಳೆಂದು ಈ ಚಿತ್ರಗಳ ಮೂಲಕ ಸಾರಿದ್ಧಾರೆ. ಜನರನ್ನು ಮೂರ್ಖರಾಗಿಸಿದ್ದಾರೆ. ಅಸಲಿಗೆ ಅಕ್ಬರ್ ಕಟ್ಟಾ ಇಸ್ಲಾಮಿನ ಅನುಯಾಯಿಯಾಗಿದ್ದನೇ ಹೊರತು ಉದಾರವಾದಿಯಾಗಿರಲಿಲ್ಲ.
ಬೇಮಿಸಾಲ್ ಅಮಿತಾಬ್ ಬಚ್ಚನ್ ನಾಯಕ ನಟನೆಯ ಚಿತ್ರ. ಬೇಮಿಸಾಲ್ ಎಂದರೆ ಅದ್ಭುತ ಎಂದರ್ಥ. ಇದರಲ್ಲಿ ಮೊಘಲರು ಅದ್ಭುತ ಎಂದು ಹೊಗಳುತ್ತಾರೆ. ಈ ವಿಚಾರಗಳನ್ನು ಬರೆದವರು ಬೇರಾರೂ ಅಲ್ಕದೆ, ಡಾ. ರಾಹಿ ಮಾಸುಮ್ ರಜಾಯ್, ಗಂಗಾ ಜಮುನಾ ತೆಹಜೀಬ್ನ್ ನಾಯಕರಾಗಿದ್ದರು.
ಅಜೆಂಡಾ ಮೇಕರ್ಸ್
ಒಂದೆರಡು ಫಿಲ್ಮ್ ಗಳಲ್ಲಿ ಹೀಗಾಗಿದ್ದರೆ ಹೌದೆಂದು ಹೋಗಬಹುದು. ಆದರೆ ಹಾಗಾಗಿಲ್ಲ. ವರ್ಷಾನುಗಟ್ಟಲೆಯಿಂದಲೂ ಒಂದು ಅಜೆಂಡಾ ಆಗಿ ಇದು ಪ್ರವಹಿಸುತ್ತಿದೆ. ಬ್ರಾಹ್ಮಣರು ಪಾಖಂಡಿಗಳು . ಹಿಂದು ಸಮುದಾಯದವರು ಬಡವರ, ಕೆಳವರ್ಗದ ಜನರ ಕಷ್ಟಕ್ಕೆ ಅವರೇ ಕಾರಣಕರ್ತರು ಎನ್ನುತ್ತ, ಮುಸ್ಲಿಮರುಗಳು , ಕ್ರಿಶ್ಚಿಯನ್ ಪಾದ್ರಿಗಳು ತುಂಬ ಒಳ್ಳೆಯವರು ಜನರಿಗೆ ಅಪಾರ ಸಹಾಯ ಮಾಡಿದರು ಎನ್ನುತ್ತ ಹೋಗುತ್ತಾರೆ.
ಉದಾಹರಣೆಗೆ ಮದರ್ ಇಂಡಿಯಾ ಚಿತ್ರ: ಇದರಲ್ಲಿ ಒಬ್ಬ ಧೂರ್ತ ಲಾಲಾನಿಂದ ಯುವಕನೊಬ್ಬ ಡಕಾಯಿತನಾಗುತ್ತಾನೆ. ಇದರ ನಿರ್ಮಾಣ ಮಾಡಿದವರು ಮೆಹಬೂಬ್ ಪ್ರೊಡಕ್ಷನ್ಸ್. ಇವರ ಲೋಗೊದಲ್ಲಿಯೇ ಕತ್ತಿ,ಸುತ್ತಿಗೆಯ ಕಮ್ಯುನಿಸ್ಟ್ ಚಿಹ್ನೆ ಇದ್ದು ಇವರು ಅಜೆಂಡಾವನ್ನೂ ಸೂಚ್ಯವಾಗಿ ಅರುಹುತ್ತದೆ.
ಇದೇ ಸಂಸ್ಥೆಯಡಿ ದೇವಾನಂದ್ ನ ಗೈಡ್ ಚಿತ್ರ ಮೂಡಿಬಂದಿದ್ದು. ಗೈಡ್ ಚಿತ್ರದ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ಮೋಸಗಾರರು ಎಂದು ತೋರಿಸಲಾಯಿತು, ಅವರ ಪಾಖಂಡಿತನವನ್ನು ಎತ್ತಿ ಹಿಡಿವ ದೃಶ್ಯಗಳನ್ನು ಅಲ್ಲಲ್ಲಿ ಸೇರಿಸಲಾಗುತ್ತದೆ.
ಎಡಪಂಥೀಯ ವಾದಿ ಕಸಿ ಆಜ್ಮಿ, ಶಬಾನಾ ಅಜ್ಮಿ ಅವರ ಪುತ್ರಿ, ಜಾವೇದ್ ಅಕ್ತರ್ ಅವರ ಅಳಿಯ. ಶೋಲೆ ಚಲನಚಿತ್ರದಲ್ಲಿ ಮಹಾನ್ ಬಲಿದಾನಿ ಚಾಚಾರನ್ನು ತೋರಿಸುತ್ತಾ” ದೇವರೇ ನನಗೆ ಇನ್ನಾಲ್ಕು ಮಕ್ಕಳನ್ನು ಕೊಟ್ಟಿದ್ದರೆ ಅವರನ್ನು ಸಮರ್ಪಿಸುತ್ತಿದ್ದೆ ” ಎಂದು ಪಿಸುಣಾರಿ ಮಾತಾಡಿಸಿದ್ದಾರೆ. ಮಜಾ ನೋಡಿ, ಇದೇ ಅಕ್ತರ್ ಚಾಚಾ ತಾಹಿರ್ ಹುಸೇನ್ರ ಹೆಸರು ಹಿಡಿದು ಟ್ವೀಟ್ ಮಾಡಿದ್ದರು. ಈ ತಾಹಿರ್ ಹುಸೇನ್ 2020 ದಿಲ್ಲಿ ದಂಗೆಯ ಮಾಸ್ಟರ್ ಮೈಂಡ್ ಎಂದು ಸಜೆಗೊಳಗಾದ ಆಸಾಮಿ.
ಇದೇ ಜಾವೇದ್ ಅಖ್ತರ್ ನ ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಾಸ್ತಿಕ ಆಗಿರುತ್ತಾನೆ. ಆದರೆ ಪವಿತ್ರವಾದ 786 ಸಂಖ್ಯೆಯನ್ನು ಕಿಸೆಯಲ್ಲಿಟ್ಟುಕೊಳ್ಳುತ್ತಾನೆ. 1970, 1980, 1990, 2000,2010 ವರ್ಷಗಳಿಂದ ಐವತ್ತು ಚಿತ್ರಗಳ ಸಂಶೋಧನಾ ನಡೆಸಿದಾಗ ಹೊರಬಂದ ಸಾರಾಂಶ ಇಲ್ಲಿದೆ: ಇದರಲ್ಲಿ 62% ಭ್ರಷ್ಟರು ವೈಶ್ಯ ವ್ಯಾಪಾರಿ ಸಮುದಾಯಗಳೆಂದು, 52% ಭ್ರಷ್ಟ ನಾಯಕರು ಬ್ರಾಹ್ಮಣರು ,72% ಸಿಕ್ಖರು ಹಾಸ್ಯದ ಸರಕಾಗಿ ಕಂಡು ಬರುತ್ತದೆ. ಆದರೆ 84% ಮುಸ್ಲಿಮರು ಇಮಾನ್ದಾರ್ ಅಂದರೆ ಪರಮ ಪ್ರಾಮಾಣಿಕರು, ಸಾಚಾಗಳೆಂದು ಬಿಂಬಿಸುತ್ತಾರೆ.
ಅಂದಿನದು ಅಂದಿಗಿರಲಿ ಇಂದು ಹಾಗಿಲ್ಲ ಎಂದು ನೀವಂದುಕೊಂಡಿರೋ ನಿಮ್ಮಷ್ಟು ಮೂರ್ಖ ಮತ್ಯಾರಿಲ್ಲ. ಸದ್ಯ ಕ್ರಿಕೆಟ್ ಆಧರಿತ ಚಿತ್ರ 83 ಯನ್ನು ನೋಡಿ, ಭಾರತೀಯ ಸೇನೆಯ ಆಹ್ವಾನ ಆಧರಿಸಿ ಪಾಕಿಸ್ತಾನ ಸೈನಿಕ ಗುಂಡಿನ ದಾಳಿ ನಿಲ್ಲಿಸುತ್ತಾನೆ, ಯಾಕೆ ಗೊತ್ತಾ ಕ್ರಿಕೆಟ್ ಸ್ಕೋರ್ ನೋಡಲಿಕ್ಕೆ !!!, ವಾವ್ರೆ..!! ಚಂದ ಚಂದ.
2019ರ ವಿಶ್ವ ಕಪ್ ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದಾಗ ಆದಿನ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು, ಪಾಕಿಸ್ತಾನ ಪರ ಪಟಾಕಿ ಸಿಡಿಸಿದ್ದು ಎಲ್ಲಿ ಗೊತ್ತಾ, ಅದು ಭಾರತದ ನೆಲದಲ್ಲಿ ! ಅದೂ ಶಾಂತಿಪ್ರಿಯರ ಮೊಹಲ್ಲಗಳಲ್ಲಿ.
ಹೀಗೆ ಚಿತ್ರಗಳಲ್ಲಿ ಬಹಳಷ್ಟು ಕಡೆ ಪಾಕಿಸ್ತಾನವನ್ನು ಎತ್ತಿ ಕುಣಿಸಿದ್ದಾರೆ. ಇದಕ್ಕೆ ಇನ್ನುಷ್ಟು ಆಳಕ್ಕೆ ಹೋಗಿ ನೋಡಬೇಕಾಗುತ್ತದೆ.
ಕಬಿರ್ ಖಾನ್ರ ತಂದೆ ರಸಿಯುದ್ದಿನ್ ಖಾನ್ ಕಮ್ಮ್ಯುನಿಷ್ಟರವನು. ಅವರು ಕರೆವ ಚಾಚಾ ಜಾನ್ ಎಂದರೆ ಮಾಜಿ ರಾಷ್ಟ್ರಪತಿ ಝಾಕಿರ್ ಹುಸೇನ್, ಇಂದಿರಾ ಗಾಂಧಿ ಕಾಲದಲ್ಲಿ ರಾಷ್ಟ್ರಪತಿಯಾಗಿದ್ದವರು. ಇವರ ಆರು ಜನ ಅಣ್ಣತಮ್ಮಂದಿರಲ್ಲಿ ಯೂಸುಫ್ ಖಾನ್ ಇತಿಹಾಸಕಾರ, ಲೇಖಕರಾಗಿದ್ದರು. ಮೆಹಮುದ್ ಹುಸೇನ್ ಪಾಕಿಸ್ತಾನ ಆಂದೋಲನದ ಚಳವಳಿಕಾರರಾಗಿದ್ದು ಕಾರಣ ಆ ದೇಶದ ಶಿಕ್ಷಣ ಸಚಿವರನ್ನಾಗಿಸಿದ್ದರು. ಅಲ್ಲದೆ ಢಾಕಾ ವಿವಿಯ ಕುಲಪತಿಗಳಾಗಿ ನೇಮಕಗೊಂಡರು. ಹುಸೇನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ;ಸಾಫಿಯಾ ಖಾನ್, ಸಾಹಿದಾ ರೆಹಮಾನ್. ಸಾಹಿದಾ ಖುರ್ಷಿದ್ ಆಲಂ ರನ್ನು ನಿಕಾಹ್ ಮಾಡಿಕೊಂಡರು ಅವರ ಮಗ ಸಲ್ಮಾನ್ ಖುರ್ಷಿದ್. ಈತ ಭಾರತದ ವಿದೇಶಿ ಮಂತ್ರಿ, ಕಾಂಗ್ರೆಸ್ ನಾಯಕ.ಉರ್ದು ಮತ್ತು ಮುಸ್ಲಿಂ ಪರವಿದ್ದ ಜೆ ಎಂ ಐ ನಲ್ಲಿ ಕಲಿತವರು. ಇದಕ್ಕೆ ಹೇಳಿದ್ದು ಸಮಸ್ಯೆ ಇವರ ಡಿ ಎನ್ ಎ ನಲ್ಲಿದೆ ಎಂದು.
ಇತ್ತೀಚೆಗೆ ಸಿಎಎ, ಎನ್ ಆರ್ಸಿ ವಿರುದ್ಧ ಗಲಾಟೆಯಾದಾಗ ಜಾವೆದ್ ಅಖ್ತರ್, ಶಬಾನ್ ಅಜ್ಮಿ , ಫರ್ಹಾನ್ ಅಖ್ತರ್, ಕಬೀರ್ ಖಾನ್, ಜಾವೆದ್ ಝಾಪ್ರಿ, ಮೊಹಮ್ಮದ್ ಆಯುಬ್ ಯಾಕೆ ಬೊಬ್ಬಿರಿದರು ? ಬಾಲಿವುಡ್ನ್ ದೈತ್ಯಶಕ್ತಿಗಳ ಹಿನ್ನೆಲೆ ಗಮನಿಸಿದರೆ ಕಮ್ಯುನಿಸ್ಟ್ ಕೆಂಪು ಛಾಯೆ ಕಾಣಿಸುತ್ತದೆ.ಅಥವಾ ಹಸಿರು ಬಣ್ಣದ ಪಾಕ್ ಝೆಂಡಾ ಇರುತ್ತದೆ. ಕಾರಣ ಇವರ ಒಲವು ಬಲವು ಎಲ್ಲ ಪಾಕಿಸ್ತಾನವೇ. ಇದೇ ಭಾರತದ ಬಾಲಿವುಡ್ನ್ ಹಿಂದಿನ ಸೂತ್ರಧಾರ ಕಾಣದ ಶಕ್ತಿ, ಇದರ ಹುನ್ನಾರ ಮನರಂಜನೆಯನ್ನು ಮೀರಿಸುವ ಪರದೆ ಹಿಂದಿನ ಕರಾಳ ಷಡ್ಯಂತ್ರವಾಗಿದೆ.
Original video Link: https://youtu.be/_ZUqR5YPrqw . We just make a story on basis of above link.