ಯಲ್ಲಾಪುರ : ಕೊಡಸೆ ಅರಣ್ಯ ವ್ಯಾಪ್ತಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಸಾಗವಾನಿ ಪೋಸ್ಟ್ ಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಅತೀ ಭಾರದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಹಿಟ್ಟಿನಬೈಲ್ ಬಳಿ ಸಂಭವಿಸಿದೆ. ಕೃಷಿ ಉದ್ದೇಶಕ್ಕೆ ಮೀಸಲಾದ ಟ್ಯಾಕ್ಟರ್ ಗಳನ್ನು ಅರಣ್ಯ ಇಲಾಖೆ ಸಾಗವಾನಿ ನಾಟಾ ಹಾಗೂ ಪೋಲ್ಸ್ ಗಳನ್ನು ಸಾಗಿಸಲು ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆಪಾದನೆ ಬಹಳ ಹಿಂದಿನಿಂದಲೂ ಕೇಳಿಬಂದಿತ್ತು.
ಉರುಳಿಬಿದ್ದ ಟ್ರಾಕ್ಟರ್ ಟ್ರಾಲಿಯಲ್ಲಿ ಸಾಮಥ್ಯಕ್ಕೂ ಮೀರಿ ಪೋಲ್ಸ್ಗಳನ್ನು ತುಂಬಲಾಗಿತ್ತು. ರಸ್ತೆಯ ಇಳಿಜಾರಿನಲ್ಲಿ ಟ್ರಾಕರ್ ಮೇಲೆ ನಿಯಂತ್ರಣ ಸಾಧಿಸಲಾಗದ ಚಾಲಕ ಟ್ರಾಲಿಯನ್ನು ರಸ್ತೆಯ ಮಧ್ಯದಲ್ಲಿಯೇ ಉರುಳಿಸಿದ್ದಾನೆ. ಹೆದ್ದಾರಿಯ ಮಧ್ಯಹರಡಿ ಬಿದ್ದ ಪೋಲ್ಸ್ ಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನ ಸಂಚಾರಕ್ಕೆ ಕೆಲ ಸಮಯ ವ್ಯತ್ಯಯವಾಗಿದ್ದು, ರಸ್ತೆಯ ಇನ್ನೊಂದು ಮಗ್ಗಲಲ್ಲಿ ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.