ಶಿರಸಿ: ಇಸ್ಕಾನ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಗಳ ಅರಿವನ್ನು ಹೆಚ್ಚಿಸುವ ಸಲುವಾಗಿ ಭಗವದ್ಗೀತೆಯ ಬಗ್ಗೆ ಇರುವ ವ್ಯಾಲ್ಯೂಸ್ ಒಲಂಪಿಯಾಡ್ ಆನ್ಲೈನ್ ಪರೀಕ್ಷೆಯಲ್ಲಿ ನಗರದ ಲಯನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರಥಮ ಹರೀಷ ಪಂಡಿತ್ 15ನೇ ರ್ಯಾಂಕ್ ಪಡೆದಿದ್ದಾನೆ.
ರಾಜ್ಯಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡ ಈ ಪರೀಕ್ಷೆಯಲ್ಲಿ ಲಯನ್ಸ್ ಶಾಲೆಯ ವಿದ್ಯಾರ್ಥಿ ಸಾಧನೆ ಮಾಡಿ ರ್ಯಾಂಕ್ ಪಡೆದಿರುವುದು ಲಯನ್ಸ ಶಾಲೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಲಯನ್ಸ್ ಶಾಲಾ ಕೇಂದ್ರದ ವಿದ್ಯಾರ್ಥಿಗಳಿಗೆ ಶಾಲಾ ಸಹಶಿಕ್ಷಕಿ ಶ್ರೀಮತಿ ಪದ್ಮಲತಾ ಶೆಟ್ಟಿ ಮಾರ್ಗದರ್ಶನ ನೀಡಿದ್ದರು.
ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಹಾಗೂ ಪಾಲಕರನ್ನು, ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ,ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ, , ಶಿರಸಿ ಲಯನ್ಸ ಕ್ಲಬ್ ಬಳಗ, ಶಾಲೆಯ ಪಾಲಕ ಬಳಗ ತುಂಬು ಅಭಿಮಾನದಿಂದ ಅಭಿವಂದಿಸಿ ಶುಭ ಹಾರೈಸಿದೆ.