Slide
Slide
Slide
previous arrow
next arrow

ಆರೋಗ್ಯ ಬಂಧು ಯೋಜನೆ ಮುಂದುವರಿಕೆ

300x250 AD

ಜೊಯಿಡಾ: ತಾಲೂಕಿನ ಕ್ಯಾಸಲರಾಕ್ ಮತ್ತು ಡಿಗ್ಗಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ಬಂಧು’ ಯೋಜನೆಯ ಮುಂದುವರಿಸಲಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಮಾ.31ರಿಂದ ‘ಆರೋಗ್ಯ ಬಂಧು’ ಯೋಜನೆಯ ಸೇವೆ ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗಿ, ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗೂ ಪರದಾಡುವಂತಾಗುತ್ತದೆ. ಈ ಸೇವೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಲಾಗಿತ್ತು. ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಮುಂದಿನ ಎರಡು ತಿಂಗಳವರೆಗೆ ಈ ಯೋಜನೆ ಮುಂದುವರೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಅವರು ತಿಳಿಸಿದ್ದಾರೆ.

300x250 AD

ಸಾರ್ವಜನಿಕರ ಬೇಡಿಕೆಯಂತೆ ಕ್ಯಾಸಲರಾಕ್ ಮತ್ತು ಡಿಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಬಂಧು ಯೋಜನೆಯನ್ನು ಮುಂದುವರೆಸಲು ಅನುಮೋದನೆ ಸಿಕ್ಕಿದ್ದು, ಈ ಪ್ರದೇಶದ ಜನರಿಗೆ ಸಿಗುತ್ತಿದ್ದ ಆರೋಗ್ಯ ಸೇವೆ ಈ ಹಿಂದಿನಂತೆ ಮುಂದುವರೆಯಲಿದೆ. ಜನರು ನಿರಾತಂಕವಾಗಿ ಇರಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top