ದಾಂಡೇಲಿ: ವಿಶ್ವದಲ್ಲೆ 12 ಲಕ್ಷ ಸದಸ್ಯರನ್ನು ಹೊಂದಿರುವ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಏಕೈಕ ದೊಡ್ಡ ಸಂಸ್ಥೆಯೆ ರೋಟರಿ ಕ್ಲಬ್. 1905 ರಲ್ಲಿ ನಾಲ್ವರು ಸದಸ್ಯರೊಂದಿಗೆ ಆರಂಭಗೊಂಡ ಈ ಸಂಸ್ಥೆ ಇಂದು 200 ದೇಶಗಳಲ್ಲಿ ಕ್ಲಬ್ ಗಳನ್ನು ಹೊಂದಿ, ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದೆ. ನಿಸ್ವಾರ್ಥ ಸೇವೆ ಮಾಡುತ್ತಿರುವ ರೋಟರಿ ಕ್ಲಬ್, ಪೊಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ ಎಂದು ರೋಟರಿ 3170ರ ಪ್ರಾಂತಪಾಲ ವೆಂಕಟೇಶ್ ದೇಶಪಾಂಡೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾಂಡೇಲಿಯ ರೋಟರಿ ಕ್ಲಬ್ ಜನಪಯೋಗಿ ಕಾರ್ಯಚುಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ವಿಶೇಷವಾಗಿ ರೋಟರಿ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಸೇವೆ ನೀಡುತ್ತಿರುವುದು ರೋಟರಿ ಕ್ಲಬ್ನ ಮಹತ್ವದ ಸತ್ಕಾರ್ಯ ಎಂದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಸಹ ಪ್ರಾಂತಪಾಲರಾದ ಗಿರೀಶ ಹಂಪಿಹೊಳಿ, ದಾಂಡೇಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೋಸೆಫ್ ಗೋನ್ಸಾಲಿಸ್, ಖಜಾಂಚಿ ದೀಪಕ್ ಭಂಡಗಿ, ರೋಟರಿ ಕ್ಲಬಿನ ಪ್ರಮುಖರುಗಳಾದ ಎಸ್.ಪ್ರಕಾಶ್ ಶೆಟ್ಟಿ, ಎಸ್.ಸೋಮಕುಮಾರ್, ಅಶುತೋಷ್ ರಾಯ್, ಪಿ.ವಿ ಹೆಗಡೆ, ಯು.ಡಿ.ನಾಯ್ಕ, ರಾಹುಲ್ ಬಾವಾಜಿ, ರವಿಕುಮಾರ್.ಜಿ.ನಾಯಕ, ಎಚ್.ವೈ.ಮೆರ್ವಾಡೆ, ಪ್ರಕಾಶ ಕಣಿವೆಹಳ್ಳಿ, ಇಮಾಮ್ ಸರ್ವರ್, ಆರ್.ಪಿ.ನಾಯ್ಕ, ಮಿಥುನ್ ನಾಯಕ, ಲಿಯೋ ಪಿಂಟೋ, ವಿಜಯ ಕುಮಾರ್ ಶೆಟ್ಟಿ, ಅರುಣಾದ್ರಿ ರಾವ್, ಮನೋಹರ್ ಕದಂ, ಡಾ.ಅಸೀಪ್ ಧಪೇದಾರ್ ಮೊದಲಾದವರು ಇದ್ದರು.