ಹಳಿಯಾಳ: ನನ್ನನ್ನು ರಾಜಕೀಯವಾಗಿ ಮುಗಿಸಲು ಸುಳ್ಳು ಪ್ರಕರಣಗಳನ್ನು ನನ್ನ ಹಾಗೂ ನನ್ನ ಕುಟುಂಬದ ಮೇಲೆ ದಾಖಲು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ಹೇಳಿದ್ದಾರೆ.
ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು ನಾನು ಎಲ್ಲವನ್ನು ಕಳೆದುಕೊಂಡಿದ್ದೇನೆ. ಎಸ್.ಎಲ್.ಘೋಟ್ನೇಕರ್ ಛತ್ರಪತಿ ಶಿವಾಜಿ ಸ್ಕೂಲ್ ಇದ್ದು ಅದರಲ್ಲಿ ರಾಜಕೀಯ ಬಳಸಿ ಎಲ್ಲವನ್ನು ಕಸಿದುಕೊಂಡಿದ್ದರು. ನಾನು ಎಂಎಲ್‌ಸಿ ಅನುದಾನ ಶಾಲೆಗೆ ಬಳಿಸಿದ್ದೇನೆ ಎಂದು ದೂರು ಬಂದಿದ್ದರಿಂದ ರಾಜೀನಾಮೆಯನ್ನು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಅರ್ಟಾಸಿಟಿ, ಕಿಡ್ನಾಪ್ ಕೇಸ್ ಹಾಕಲಾಗಿದೆ. ಡಿಜೆ ಹಾಕಿದ್ದಾರೆ ಎಂದು ನನ್ನ ಮಗನ ಮೇಲೆ ದೂರು ದಾಖಲು ಮಾಡಿದರು. ನನ್ನ ಹೆಂಡತಿ ಮೇಲೆ ಸಹ ದೂರು ದಾಖಲು ಮಾಡಲಾಯಿತು. ಬೇಕಾದರೆ ನಾನು ಧರ್ಮಸ್ಥಳ ದೇವರ ಮುಂದೆ ಬಂದು ಹೇಳುತ್ತೇನೆ ವಂಚನೆ ಮಾಡಿಲ್ಲ ಎಂದು ನನ್ನ ಬಳಿಯೇ ಕೋಟಿಗಟ್ಟಲೇ ಹಣ ಇರುವಾಗ ಈ ರೀತಿ ಹಣ ಯಾಕೆ ಬೇಕು ಎಂದು ಘೋಟ್ನೇಕರ್ ಹೇಳಿದ್ದಾರೆ.
ನನ್ನ ಮೇಲೆ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಶಾಸಕ ದೇಶಪಾಂಡೆ ಕುಮ್ಮಕ್ಕು ನೀಡಿ ಪ್ರಕರಣ ದಾಖಲಾಗುವಂತೆ ಮಾಡುತ್ತಿದ್ದಾರೆ. ದೇಶಪಾಂಡೆ ಅವರ ಜೊತೆ ಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ರೀತಿ ಕೇಸ್ ದಾಖಲು ಮಾಡುತ್ತಿದ್ದು ಇದು ಇಡೀ ಕ್ಷೇತ್ರದ ಜನರಿಗೆ ತಿಳಿದಿದೆ ಎಂದಿದ್ದಾರೆ. ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ ನಂತರ ಒಂದು ಕೇಸು ಇಲ್ಲದ ಮನುಷ್ಯನ ಮೇಲೆ ದೂರು ದಾಖಲು ಪ್ರಾರಂಭವಾಯಿತು. ಕೋರ್ಟ್ ಮೆಟ್ಟಲೇರದ ನನ್ನನ್ನ ಕೋರ್ಟ್ ಮೆಟ್ಟಲೇರುವಂತೆ ಮಾಡಿದರು. ಚುನಾವಣೆಯಲ್ಲಿ ನನಗೆ ಟಾರ್ಚರ್ ಮಾಡಲು ಈ ರೀತಿ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಘೋಟ್ನೇಕರ್ ಹೇಳಿದ್ದಾರೆ.