Slide
Slide
Slide
previous arrow
next arrow

ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಶಂಕರ ಮುಗದ

300x250 AD

ಶಿರಸಿ: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿ., ಬೆಂಗಳೂರು, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ತರಬೇತಿ ಕೇಂದ್ರ ಇವರಿಂದ ಕ್ಷೀರ ಸಂಜೀವಿನಿ ಯೋಜನೆಗೆ ಅಳವಡಿಸಿರುವ ಉತ್ತರಕನ್ನಡ ಜಿಲ್ಲೆಯ ಆಯ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರುಗಳಿಗೆ ಏರ್ಪಡಿಸಿರುವ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ ಕಾನಕೊಪ್ಪ ಹಾಗೂ ಹುಡೇಲಕೊಪ್ಪ ಹಾಲು ಉತ್ಪಾದಕರ ಮಹಿಳಾ ಸಂಘಗಳಲ್ಲಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2022 ನೇ ಸಾಲಿನಲ್ಲಿ ಪ್ರಾರಂಭವಾದ ಮಹಿಳಾ ಸಹಕಾರ ಸಂಘಗಳಲ್ಲಿ ಕಾನಕೊಪ್ಪ ಹಾಗೂ ಹುಡೇಲಕೊಪ್ಪ ಸಂಘಗಳು ಸೇರಿವೆ. ಸಂಘ ಪ್ರಾರಂಭವಾಗಿ 1 ವರ್ಷ ಕಳೆದಿದ್ದು, ಸಂಘದ ಪ್ರಗತಿಗೆ ಮುಖ್ಯ ಕಾರಣೀಕರ್ತರಾದಂತವರು ಈ ಭಾಗದ ಕ್ರಿಯಾಶೀಲ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆಯವರು, ಅವರ ಪರಿಶ್ರಮ ಹಾಗೂ ಸಂಘಗಳ ಬಗ್ಗೆ ಇರುವ ಅಪಾರ ಆಸಕ್ತಿ ನಿಮ್ಮ ಸಂಘಗಳ ಪ್ರಗತಿಗೆ ಬಹುಮುಖ್ಯ ಕಾರಣವಾಗಿದೆ ಎಂದರು. ಯಾವುದೇ ಮಹಿಳಾ ಸಹಕಾರ ಸಂಘಗಳು ಪ್ರಾರಂಭವಾದ 5 ರಿಂದ 10 ವರ್ಷಗಳವರೆಗೆ ಯಾವುದೇ ಯೋಜನೆಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುವುದಿಲ್ಲ ಆದರೆ ನಿಮ್ಮ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಆಸಕ್ತಿಯನ್ನು ಪರಿಗಣಿಸಿ ಕ್ಷೀರ ಸಂಜೀವಿನಿ ಯೋಜನೆಯನ್ನು ತಮ್ಮ ಸಂಘಗಳಿಗೆ ನಿರ್ದೇಶಕರ ಆಶಯದ ಮೇರೆಗೆ ನೀಡಲಾಗಿದ್ದು ಯೋಜನೆಯ ಸದುಪಯೋಗವನ್ನು ತಾವೆಲ್ಲರೂ ಪಡೆಯಬೇಕು. ಈಗಾಗಲೇ ಒಕ್ಕೂಟದಿಂದ ಅಂಚಿನ ಹಣವನ್ನು ಕ್ಷೀರ ಸಂಜೀವಿನಿ ಯೋಜನೆಯ ಅಡಿ ಬಿಡುಗಡೆ ಮಾಡಿದ್ದು ಆ ಹಣದಿಂದ ತಾವುಗಳು ಆಕಳುಗಳನ್ನು ಖರೀದಿಸಿದ್ದೀರಿ. ಖರೀದಿಸಿದ ಆಕಳಿನಿಂದ ಅತೀ ಹೆಚ್ಚು ಹಾಲನ್ನು ಉತ್ಪಾದನೆ ಮಾಡುವುದರ ಮೂಲಕ ಲಾಭವನ್ನು ಗಳಿಸಿ ಅಂಚಿನ ಹಣವನ್ನು ಒಕ್ಕೂಟಕ್ಕೆ ಮರುಪಾವತಿ ಮಾಡಿ ಸಂಘದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಅಧಿಕ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರಬ್ಬರ್‌ ಮ್ಯಾಟ್‌, ಹಾಲು ಕರೆಯುವ ಯಂತ್ರ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಅನುದಾನದ ಅಡಿಯಲ್ಲಿ ನೀಡಲಾಗಿದ್ದು, ಮುಂದಿನ ದಿನಗಳಲ್ಲೂ ಸಹ ತಮಗೆ ಸಿಗಬಹುದಾದ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಒಕ್ಕೂಟ ಹಾಗೂ ಕಲ್ಯಾಣ ಸಂಘಗಳಿಂದ ನೀಡಲಾಗುವುದು ಎಂದರು.

ನಂತರ ಮಾತನಾಡಿದ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ, ನಾನು ಧಾರವಾಡ ಸಹಕಾರ ಹಾಲು ಒಕ್ಕೂಟದಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಾ ಬಂದು ಸುಮಾರು 9 ವರ್ಷಗಳು ಕಳೆದಿವೆ ಈ ವರ್ಷಗಳಲ್ಲಿ ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘ ನನ್ನ ಸಂಘವೆಂದು ಪರಿಗಣಿಸಿ ನಮ್ಮ ಎಲ್ಲಾ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಿ ನಮ್ಮ ಹಾಲು ಸಂಘಗಳ ಕಾರ್ಯಕ್ರಮಗಳಿಗೆ ಬಂದು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದಂತಹ ಒಬ್ಬ ಕ್ರಿಯಾಶೀಲ ಅಧ್ಯಕ್ಷರನ್ನು ನಾನು ನೋಡಿರುವುದು ಇದೇ ಮೊದಲು ಎಂದರು.

300x250 AD

ಕ್ಷೀರ ಸಂಜೀವಿನಿ ಕಾರ್ಯಕ್ರಮದ ಮೂಲಕ ಬಹುಮುಖ್ಯವಾಗಿ ಹೈನುಗಾರಿಕೆಯನ್ನು ನಡೆಸಿಕೊಂಡು ಬರುತ್ತಿರುವ ರೈತರಿಗೆ ಉತ್ತೇಜನ ನೀಡಿ ಹಾಲು ಉತ್ಪಾದಕ ರೈತರನ್ನು ಸ್ವಾವಲಂಬಿಗಳಾಗುವಂತೆ ಮಾಡುವುದಾಗಿದೆ. ನಮ್ಮ ಭಾಗದಲ್ಲಿ ಹಲವು ಕಡೆ ಹೈನುಗಾರಿಕೆಯನ್ನು ಮಾಡುತ್ತಿದ್ದು ಆದರೆ ಅದರಿಂದ ಸೂಕ್ತ ಲಾಭಗಳಿಸುವುದು ಹೇಗೆ ಎಂಬುದನ್ನು ತಿಳಿಯದೇ ಇರುವುದಿಂದ ಈ ತರಬೇತಿ ಕಾರ್ಯಕ್ರಮದ ಮೂಲಕ ಹೈನೋದ್ಯಮವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದರ ಜೊತೆಗೆ ಹೇಗೆ ಈ ಕಸುಬನ್ನು ಲಾಭದಾಯಕವಾಗಿ ಮಾಡುವುದು ಎಂಬುದೇ ಈ ತರಬೇತಿ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು. 4 ವರ್ಷಗಳ ಹಿಂದೆ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಸಂಗ್ರವಾಗುತ್ತಿದ್ದ ಹಾಲಿನಿಂದ ತಯಾರಿಸಲ್ಪಡುತ್ತಿದ್ದ ಹಾಲಿನ ಪುಡಿಯನ್ನು ಮಾರಾಟ ಮಾಡುವುದು ನಮ್ಮಿಂದ ಕಷ್ಟಸಾಧ್ಯವಾಗಿತ್ತು ಆದರೆ ಪ್ರಸ್ತುತವಾಗಿ ಹಾಲಿಗೆ ಹಾಗೂ ಹಾಲಿನ ಉತ್ಪನ್ನಗಳಿಗೆ ಅಧಿಕ ಬೇಡಿಕೆಯಿದ್ದು, ಹೈನುಗಾರಿಕೆ ನಡೆಸಲು ಬೇಕಾಗುವ ಎಲ್ಲ ಅನುಕೂಲ ಪರಿಸ್ಥಿತಿ ಇಂದು ಲಭ್ಯವಿದ್ದು, ಕ್ಷೀರ ಸಂಜೀವಿನಿ ಯೋಜಯಂತಹ ಕಾರ್ಯಕ್ರಮದ ಮೂಲಕ ರೈತರಲ್ಲಿ ಹೈನುಗಾರಿಕೆಯ ಬಗ್ಗೆ ಜಾಗೃತಿ ಮೂಡಿಸಿ ಹೈನೋದ್ಯಮದ ಮೂಲಕ ಸಹ ನಾವು ಹೆಚ್ಚು ಲಾಭಗಳಿಸಬಹುದೆಂಬ ವಿಚಾರನ್ನು ಮನದಟ್ಟು ಮಾಡಲಾಗುವುದು. ಜಿಲ್ಲೆಯ ರೈತರು ಹೈನೋದ್ಯಮದಿಂದ ವಿಮುಖರಾಗದೇ ಮನೆಗೊಂದು ಹಸುಕಟ್ಟಿ ಗ್ರಾಮಕ್ಕೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾವು ಸ್ಥಾಪಿಸುತ್ತೇವೆ ಎಂದು ತಿಳಿಸಿದರು.

ಅತೀ ಹೆಚ್ಚು ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ ಅಮುಲ್‌ ಎಂಬ ದೊಡ್ಡ ಸಹಕಾರ ಸಂಸ್ಥೆ ಇಂದು ವಿಶ್ವ ವಿಖ್ಯಾತವಾಗಿದೆ ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಕೂಡಾ ಅಂತಹ ಪ್ರಯತ್ನಗಳು ಹೈನುಗಾರಿಕೆಯಲ್ಲಿ ಆಗಬೇಕಾಗಿದ್ದು ಅದಕ್ಕೆ ತಮಗೆ ಬೇಕಾದ ಎಲ್ಲಾ ಸಹಾಯ ಸವಲತ್ತುಗಳನ್ನು ಸದಾ ಒದಗಿಸಲು ಒಕ್ಕೂಟದ ಅಧ್ಯಕ್ಷರು ಹಾಗೂ ನಾನು ಯಾವಾಗಲೂ ಸಿದ್ದ ಎಂದರು.

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಲೋಹಿತೇಶ್ವರ ಕೆ ಎಂ, ಜಂಟೀ ನಿರ್ದೇಶಕರಾದ ಡಾ. ವಿರೇಶ ತರಲಿ, ನಿವೃತ್ತ ಜಂಟೀ ನಿರ್ದೇಶಕರಾದ ಡಾ. ಡಿ.ಎಸ್.ಹೆಗಡೆ, ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್‌.ಬಿಜೂರ್‌, ಒಕ್ಕೂಟದ ವಿಸ್ತರಣಾಧಿಕಾರಿಗಳು ಹಾಗೂ ಕಾನಕೊಪ್ಪ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಧಾ ನಾಯ್ಕ, ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಚೇತನಾ ದೇವಾಡಿಗ, ಸಂಘದ ಆಡಳಿತ ಮಂಡಳಿಯ ಸದಸ್ಯರು, ರೈತ ಉತ್ಪಾದಕರ ಕಂಪನಿ ನಿ., ದೊಡ್ನಳ್ಳಿಯ ನಿರ್ದೇಶಕರಾದ ಸುಭಾಷ ಶಿರಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವೆಂದ್ರ ನಾಯ್ಕ, ಸದಸ್ಯರಾದ ಹುಲಿಯಾ ಗೌಡ, ಪಿ.ಡಿ.ಒ. ಕುಮಾರ ಸಿ ವಾಸನ, ವಕೀಲರ ಸಂಘ ಶಿರಸಿಯ ಅಧ್ಯಕ್ಷರಾದ ಸಿ.ಎಫ್. ಈರೇಶ ಮತ್ತು ಹುಡೇಲಕೊಪ್ಪ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರಾದ ಸುಮಾ ನಾಗರಾಜ ಹೆಗಡೆ, ಮುಖ್ಯಕಾರ್ಯನಿರ್ವಾಹಕರಾದ ಹೇಮಾ ವಿನಾಯಕ ಅರಳೇಶ್ವರ, ಗ್ರಾಮಪಂಚಾಯತಿ ಸದಸ್ಯರಾದ ಶ್ರೀಮತಿ ಶ್ವೇತಾ ಹೆಗಡೆ, ಒಕ್ಕೂಟದ ಸಿಬ್ಬಂಧಿಗಳಾದ ಮೌನೇಶ ಎಂ ಸೋನಾರ, ಅಭಿಷೇಕ ನಾಯ್ಕ, ಜಯಂತ ಪಟಗಾರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top