Slide
Slide
Slide
previous arrow
next arrow

ಅನರ್ಹ ಸಂಸದ ರಾಹುಲ್‌ ಗಾಂಧಿಗೆ ಸರ್ಕಾರಿ ಬಂಗಲೆ ತೊರೆಯಲು ನೋಟಿಸ್

300x250 AD

ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ  ತುಘಲಕ್‌ ಲೇನ್‌ ಬಂಗಲೆಯನ್ನು ತೆರವು ಮಾಡುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಲಾಗಿದೆ.

ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಿಂದ ಅನರ್ಹಗೊಂಡ ಎರಡು ದಿನಗಳ ನಂತರ ಲೋಕಸಭೆಯ ವಸತಿ ಸಮಿತಿಯಿಂದ ಅವರಿಗೆ ತೆರವು ನೋಟಿಸ್ ಬಂದಿದೆ.

ಆದರೆ ತೆರವು ನೋಟಿಸ್ ತಮಗೆ ಬಂದಿಲ್ಲ ಎಂದು ರಾಹುಲ್ ಗಾಂಧಿ ತಂಡ ಹೇಳಿದೆ.

ಇನ್ನೊಂದೆಡೆ ಗುಜರಾತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ‌ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

300x250 AD

“ಝಡ್-ಪ್ಲಸ್” ಭದ್ರತೆಯನ್ನು ಸ್ವೀಕರಿಸುವವರಾಗಿ  ಗಾಂಧಿಯವರು ಸರ್ಕಾರವು ಒದಗಿಸುವ ವಸತಿಗೆ ಅರ್ಹರಾಗಿರುತ್ತಾರೆ. ಹೀಗಾಗಿ ಅವರನ್ನು ಸರ್ಕಾರಿ ಬಂಗಲೆಯಿಂದ ಹೊರಹಾಕಲು ತಾಂತ್ರಿಕತೆ ಅಡೆತಡೆ ಇದೆ ಎಂದು ಮೂಲಗಳು ತಿಳಿಸಿವೆ.

12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡಲು ಗಾಂಧಿ ಅವರಿಗೆ ಏಪ್ರಿಲ್ 23 ರವರೆಗೆ ಸಮಯ ನೀಡಲಾಗಿದೆ.

Share This
300x250 AD
300x250 AD
300x250 AD
Back to top