💐💐 ಹಾರ್ದಿಕ ಅಭಿನಂದನೆಗಳು💐💐
ಪ್ರತಿಷ್ಠಿತ ಜಿ-20 ಒಕ್ಕೂಟದ ನಾಯಕತ್ವವನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಿದ್ದು ಈ ಹಿನ್ನೆಲೆಯಲ್ಲಿ ಪ್ರಪಂಚದ ರಾಷ್ಟ್ರಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹಾಗೂ ಮಾನವೀಯತೆ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಿವಿಲ್ ಸೊಸೈಟಿಗಳ ಆರ್ಗನೈಜೆಷನ್‌ಗಳ ಪಾತ್ರದ ಕುರಿತು ವಿಷಯ ಮಂಡಿಸಲು ಮಹಾರಾಷ್ಟ್ರದ ನಾಗಪುರದಲ್ಲಿ ಮಾ. 20 ರಿಂದ 22 ರವರೆಗೆ 3 ದಿನಗಳ ಕಾಲ ಅಂತರಾಷ್ಟ್ರೀಯ ಜಿ-20 ಒಕ್ಕೂಟ ರಾಷ್ಟ್ರಗಳ ಸಿವಿಲ್- 20 ಇಂಡಿಯಾ 2023 ಅಂತರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ.
ಈ ಸಮಾವೇಶಕ್ಕೆ ಕರ್ನಾಟಕದಿಂದ ಆಯ್ಕೆಯಾದ ಮೂವರಲ್ಲಿ ನಮ್ಮ ಶಿರಸಿಯ ನಮ್ಮ ಸಮಾಜದ ಹೆಮ್ಮೆಯ ಪುತ್ರರು, ಸಮುದಾಯಾಭಿವೃದ್ಧಿ ತಜ್ಞರು, ಸ್ಕೊಡ್‌ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ರಾಜ್ಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯದ ಮಾಜಿ ಅಧ್ಯಕ್ಷರೂ ಆಗಿರುವ ಡಾ. ವೆಂಕಟೇಶ ನಾಯ್ಕ ಒಬ್ಬರಾಗಿರುವುದು ನಮಗೆ ಅತೀವ ಸಂತಸ ತಂದಿದೆ.
ಅವರ ಸಮಾಜ ಸೇವೆಗೆ ಇನ್ನಷ್ಟು ಹೆಚ್ಚಿನ ಸ್ಥಾನಮಾನಗಳು ಲಭಿಸಲೆಂದು ಶುಭಹಾರೈಸಿ ಅವರಿಗೆ ಪ್ರೀತಿಯಿಂದ ಅಭಿಮಾನದಿಂದ ಅಭಿನಂದನೆ ಸಲ್ಲಿಸುವ,
ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು
ಬ್ರಹ್ಮಶ್ರೀ ನಾರಾಯಣಗುರು ಸೇವಾ ಟ್ರಸ್ಟ್ (ಲ.) ಶಿರಸಿ
ಶಿರಸಿ ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ (ಲ.) ಶಿರಸಿ
ಶಿರಸಿ ತಾಲೂಕಾ ಆರ್ಯ ಈಡಿಗ ನಾಮಧಾರಿ ಅಲ್ಲವ ಯುವಕರ ಸಂಘ, ಶಿರಸಿ