Slide
Slide
Slide
previous arrow
next arrow

ಶಿರಳಗಿ‌ ಜೋಷಿ ಎಲೆಮರೆಯ ಕಾಯಿಯಂತಿದ್ದು ಕಲಾ ಸಾಧನೆಗೈದವರು: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ನಗದ ಟಿ.ಆರ್.ಎಸ್.ಸಭಾಂಗಣದಲ್ಲಿ ಶನಿವಾರ ನಡೆದ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಸ್ಕರ ಜೋಶಿ ಶಿರಳಗಿ ಇವರಿಗೆ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಜೋಶಿಯವರು  ಎಲೆ ಮರೆಯ ಕಾಯಿಯ ಹಾಗೆ ಯಕ್ಷಗಾನದಲ್ಲಿ ಪಾತ್ರವನ್ನು ಮಾಡಿ ಕಲಾ ಸಾಧನೆಯನ್ನು ಮಾಡಿದವರು. ಚಿಕ್ಕ ವಯಸ್ಸಿನಲ್ಲಿ ನೋಡಿದ ಅವರ ಪಾತ್ರಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಇಂತಹ ಶ್ರೇಷ್ಠ ಕಲಾವಿದರನ್ನು ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಅವರಿಗೆ ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಜೋಶಿಯವರು ಕಲಾತಪಸ್ವಿಗಳಾಗಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದು ಅವರು ನಿರ್ವಹಿಸಿದ ಪಾತ್ರಗಳಿಗೆ ತಮ್ಮದೇ ಛಾಪನ್ನು ಮೂಡಿಸಿದವರು.

300x250 AD

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಡಾ.ಜಿ.ಎ.ಹೆಗಡೆ ಸೋಂದಾ ಮಾತನಾಡಿ, ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ನ ಕಾರ್ಯವೈಖರಿಯನ್ನು ಕೊಂಡಾಡಿದರು.ಮತ್ತು ಶಿರಸಿ ಮೇಳ ನಮ್ಮ ಮೇಳ ಎಂಬ ಭಾವನೆ ನಮಗಿರಲಿ ಮತ್ತು ಅದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಸಂಮಾನಕ್ಕೆ ಉತ್ತರಿಸುತ್ತಾ, ಶಿರಳಗಿ ಜೋಶಿಯವರು, ತಾವು ಬೆಳೆದು ಬಂದ ದಾರಿ ಮತ್ತು ತಮ್ಮ ಉನ್ನತಿಗೆ ಸಹಕರಿಸಿದವರನ್ನು ಸ್ಮರಿಸಿದರು ಮತ್ತು ಸನ್ಮಾನ ನೀಡಿದ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಗೆ ಒಳಿತನ್ನು ಬಯಸಿದರು.
ಆರಂಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಕೇಶವ ಹೆಗಡೆ ನಾಗರಕುರ ಎಲ್ಲರನ್ನು ಸ್ವಾಗತಿಸಿದರು. ಸುಜಯ ಕೆ.ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೂಪಾ ಸುಜಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ದಕ್ಷಯಜ್ಞ ಎಂಬ ಪೌರಾಣಿಕ ಪ್ರಸಂಗದ ಆಖ್ಯಾನ ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಇವರಿಂದ ಉತ್ತಮವಾಗಿ ಪ್ರದರ್ಶನಗೊಂಡಿತು.

Share This
300x250 AD
300x250 AD
300x250 AD
Back to top