ಅಂಕೋಲಾ: ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪಿ.ಎಂ ಜೂನಿಯರ್ ಕಾಲೇಜಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಭಾರಿ ಶಿರಸಿಯ ಚೈತ್ರಾ ನಾಯಕ ಮತ್ತು ಕಾರವಾರದ ಹಿರಿಯ ಯೋಗ ಸಾಧಕಿ ಯಮುನಾ ಶೇಟ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಸಮಾಜ ಸೇವಕಿ ಭಾಗೀರಥಿ ಹೆಗಡೆಕಟ್ಟೆ ಹಾಗೂ ಉಪನ್ಯಾಸಕಿ ಮತ್ತು ಬಹುಭಾಷಾ ಸಾಹಿತಿ ಸ್ನೇಹ ನಾರ್ವೆಕರ ಅವರನ್ನು ಸನ್ಮಾನಿಸಲಾಯಿತು. ನಂತರದಲ್ಲಿ ಪತಂಜಲಿ ಮಹಿಳಾ ತಂಡದಿಂದ ಹಾಗೂ ಶಾಲಾ ತಂಡಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಿದವು.
ತಾಲೂಕು ಪ್ರಭಾರಿ ಜ್ಯೋತ್ಸ್ನಾ ನಾರ್ವೇಕರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಧಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ಮಿತಾ ರಾಯಚೂರ ಪ್ರಾಸ್ತಾವಿಕ ಮಾತನಾಡಿದರು. ಶೀಲಾ ನಾಯಕ ಸರ್ವರನ್ನು ಸ್ವಾಗತಿಸಿದರು. ಮಮತಾ ನಾಯಕ ವಂದಿಸಿದರು. ನಿರುಪಮಾ ಶ್ಯಾಮಸುಂದರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ರಾಧಿಕಾ ಆಚಾರಿ ಉಪಸ್ಥಿತರಿದ್ದು ಮಾತನಾಡಿದರು. ತಾಲೂಕಿನ ಪ್ರಮುಖರು ಹಾಗೂ ಪತಂಜಲಿ ಪರಿವಾರದವರು ಉಪಸ್ಥಿತರಿದ್ದರು.