ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದಲ್ಲಿ ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ವೇ.ಮೂ. ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿಯವರ ದಿವ್ಯ ಉಪಸ್ಥಿತಿಯಲ್ಲಿ , ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಮತ್ತು ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ನಟರಾಜ ಎಮ್ ಹೆಗಡೆ &ಗೆಳೆಯರ ಬಳಗ)ದವರ ಸಂಯುಕ್ತ ಆಶ್ರಯದಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ಇತ್ತೀಚೆಗೆ ‘ನಾಣಿಕಟ್ಟಾ ಹಬ್ಬ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಪ್ರಾರಂಭದಲ್ಲಿ ಚಿಕ್ಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಭರತನಾಟ್ಯ, ವೈವಿಧ್ಯಮಯ ಕಾರ್ಯಕ್ರಮಗಳು ಸುಂದರವಾಗಿ ಜರುಗಿತು. ನಂತರದ ಸಭಾಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿಯನ್ನು ವೇ.ಮೂ. ವಿನಾಯಕ ಸು. ಭಟ್ಟ ಮತ್ತೀಹಳ್ಳಿ ವಹಿಸಿದರೆ,ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ,ಮತ್ತು ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ್ ನ ಅಧ್ಯಕ್ಷ ಉಪೇಂದ್ರ ಪೈ ನೆರವೇರಿಸಿದರು.
ನಂತರ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಈ ವರ್ಷ 20 ಯಕ್ಷಗಾನ ಕಾರ್ಯಕ್ರಮಗಳನ್ನು ಆಯಾ ಭಾಗಗಳ ಸಮರ್ಥ ಸಂಘಟಕರನ್ನು ಆಯ್ಕೆ ಮಾಡಿ, ಅಂಥವರಿಗೆ ನೀಡಿ, ಅವರ ಸಂಯುಕ್ತ ಆಶ್ರಯದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡಿಸುವ ಗುರಿ ನನ್ನದಾಗಿದೆ,ಹಾಗೇ ಶಿಕ್ಷಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ನಮ್ಮ ಟ್ರಸ್ಟ್ ವತಿಯಿಂದ ಸಹಾಯ-ಸಹಕಾರ ಮಾಡುತ್ತಾ ಇದ್ದೇವೆ, ಸದ್ಯ ನಮ್ಮ ತಾಲೂಕಾದ ಸಿದ್ದಾಪುರದಲ್ಲಿ ಕೆ.ಜಿ ನಾಯ್ಕ ಹಣಜಿಬೈಲ್ ಅಧ್ಯಕ್ಷತೆಯಲ್ಲಿ “ಸಿದ್ದಾಪುರ ಉತ್ಸವ” ಮಾಡಿ ಯಶಸ್ವಿಗೊಂಡಿದೆ. ಸೇವಾ ಟ್ರಸ್ಟ್ ವತಿಯಿಂದ ಹೀಗೆ ಹತ್ತು-ಹಲವು ಸೇವಾ ಕಾರ್ಯಗಳನ್ನು ಮಾಡಿದ್ದೇವೆ ಎಂದು ನುಡಿದರು.
ಹಾಗೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗಲಿ ಸೇವಾ ಸಹಕಾರಿ ಸಂಘದ ದಕ್ಷ ಅಧ್ಯಕ್ಷರಾದ ನಾರಾಯಣ ಬಿ. ಹೆಗಡೆ ಮತ್ತೀಹಳ್ಳಿ ವಹಿಸಿ ಮಾತನಾಡಿ, ಸಾಂಸ್ಕೃತಿಕ ಕಲೆ ಯಕ್ಷಗಾನ, ಅದನ್ನು ಉಳಿಸಿ ಬೆಳಸುವಲ್ಲಿ ನಮ್ಮ-ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಕಳೆದ 19- 20 ವರ್ಷಗಳಿಂದ ನಮ್ಮ ಉಪೇಂದ್ರ ಪೈ ಅವರು ತಮ್ಮ ಶ್ರಮ ವಹಿಸಿ ಕಲೆಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸುತ್ತಿದ್ದಾರೆ. ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಎಲ್ಲಾ ಸದಸ್ಯರೂ ಸಹ ಯಕ್ಷಗಾನಕ್ಕೆ, ಸಾಂಸ್ಕೃತಿಕ ಕಲೆಗೆ ಒತ್ತು ನೀಡಿ ಪ್ರೋತ್ಸಾಹ ಮಾಡುತ್ತಾ, ಕಾರ್ಯಕ್ರಮ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಸಂಘಟನೆಗೆ ಬೆಂಬಲವನ್ನು ನೀಡಿ ಕಲೆಯನ್ನು ಉಳಿಸಿ-ಬೆಳೆಸಿ ಎಂದು ಸ್ಪುಟವಾಗಿ ನುಡಿದರು.
ಹಾಗೇ ಮುಖ್ಯ ಅತಿಥಿಯಾಗಿ ಎ.ಜಿ.ನಾಯ್ಕ ಬರಣಿ, ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀನಾರಾಯಣ ಎಮ್. ಹೆಗಡೆ ಹೂಡ್ಲಮನೆ, ನಾಣಿಕಟ್ಟಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ನರಹರಿ ಹೆಗಡೆ ಕರ್ಕಿಸವಲ್, ಹಿರಿಯ ಪ್ರಾಥಮಿಕ ತ್ಯಾಗಲಿ ಶಾಲೆ ನಾಣಿಕಟ್ಟಾದ ಅಧ್ಯಕ್ಷ ಗಣೇಶ ನಾಯ್ಕ ನಾಣಿಕಟ್ಟಾ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಹಿರಿಯರಾದ ಎಮ್. ಎಮ್ ಹೆಗಡೆ ಹಂಗಾರಖಂಡ ಸೂರನ್, ಮತ್ತು ಪ್ರಭಾಕರ ಗ.ಹೆಗಡೆ ಸೂರನ್, ರವೀಂದ್ರ ಗಂ. ಹೆಗಡೆ ಸೂರನ್, ಉಮೇಶ ಗ. ಹೆಗಡೆ ಸೂರನ್ ಹಾಗೂ ಸಂಘಟಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಯಕ್ಷರಂಗದ ಸಾಧಕ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿಗೆ ಸೇರಿದ ಸಹಸ್ರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ ಗೌರವ ಸನ್ಮಾನ ನೀಡಲಾಯಿತು. ನಂತರ ರಾತ್ರಿ 9-30 ರಿಂದ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾಮಕ್ಕಿ, ಹೊನ್ನಾವರ ಮತ್ತು ದಿಗ್ಗಜ ಅತಿಥಿ ಕಲಾವಿದರಿಂದ ಅದ್ಧೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನ “ಭೀಷ್ಮ ವಿಜಯ” ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಿದ್ಧ ಭಾಗವತರಾದ ಶಂಕರ ಭಟ್ಟ ಬ್ರಹ್ಮೂರು, ಜಿಲ್ಲೆ ಕಂಡಂತಹ ಯುವ ಪ್ರತಿಭೆ ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಹಾಗೇ ಮದ್ದಲೆಯಲ್ಲಿ ನಾದಶಂಕರ ,ಮದ್ದಲೆ ಬ್ರಹ್ಮ ಶಂಕರ ಭಾಗವತ ಯಲ್ಲಾಪುರ, ಮತ್ತು ಚಂಡೆಯ ಗಂಡುಗಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಮತ್ತು ಯುವ ಚಂಡೆ ಮಾಂತ್ರಿಕ ಪ್ರಸನ್ನ ಭಟ್ಟ ಹೆಗ್ಗಾರ ಚಂಡೆಯ ಝೇಂಕಾರ ನಡೆಸಿದರು.
ರಾಜ್ಯ ಕಂಡ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ-ಭೀಷ್ಮನಾಗಿ, ವಿದ್ಯಾಧರ ರಾವ್ ಜಲವಳ್ಳಿ -ಸಾಲ್ವನಾಗಿ, ಡಾ.ಪ್ರದೀಪ ಸಾಮಗ-ಅಂಬೆಯಾಗಿ, ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತ ಅಶೋಕ ಭಟ್ಟ – ಪರಶುರಾಮನಾಗಿ, ಯಕ್ಷ ಲೋಕ ಕಂಡ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ ಅವರು ದೂತ ಮತ್ತು ಬ್ರಾಹ್ಮಣನ ಪಾತ್ರವನ್ನು ಸುಂದರವಾಗಿ ಮಾಡಿದರೇ, ಮಂತಿಯಾಗಿ ಮಾಬ್ಲೇಶ್ವರ ಗೌಡ ಹಾರೇಕೊಪ್ಪ,ಅಂಬಾಲಿಕೆಯಾಗಿ ಅವಿನಾಶ ಕೊಪ್ಪ, ಸಖಿಯಾಗಿ ರಾಮಚಂದ್ರ ಮೂಗದೂರು(ಸಾಗರ) & ದೇಶಾಧಿಪಾಲಕರಾಗಿ ಸ್ಥಳೀಯರಾದ ಕುಮಾರ ಆನಂದ ಹೆಗಡೆ ಶೀಗೇಹಳ್ಳಿ, ಕುಮಾರ ಗಣೇಶ ಹೆಗಡೆ ಸೂರನ್ ಅವರವರ ಪಾತ್ರಕ್ಕೆ ಸುಂದರ ಚಿತ್ರಣ ನೀಡಿದರು. ಕಲಾ ಪ್ರೇಮಿಗಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಮಕ್ಕಳ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಿರ್ಮಲಾ ಶಶಿಧರ ಹೆಗಡೆ ತ್ಯಾಗಲಿ, ಮತ್ತು ವಾಸುದೇವ ಎನ್. ನಾಯ್ಕ ನಡೆಸಿದರೆ,ಸಭಾ ಕಾರ್ಯಕ್ರಮದ ಸ್ವಾಗತ ಗೀತೆಯನ್ನು ಶ್ರೀಮತಿ ವಾಣಿ ರವೀಂದ್ರ ಹೆಗಡೆ ಸೂರನ್, ಪ್ರಸ್ಥಾವನಾ ನುಡಿಯನ್ನು ನಟರಾಜ ಎಮ್. ಹೆಗಡೆ ಸೂರನ್, ಸಭೆಯ ಸ್ವಾಗತ ಭಾಷಣವನ್ನು ರಮೇಶ ಎನ್. ನಾಯ್ಕ ಬಾಳೇಕೈ, ಸಭಾ ಕಾರ್ಯಕ್ರಮದ ನಿರೂಪಣೆಯನ್ನು ರಮೇಶ ಟಿ. ನಾಯ್ಕ ಹಂಗಾರಖಂಡ, ವಂದನಾರ್ಪಣೆಯನ್ನು ಶಂಕರ ನಾರಾಯಣ ಆದಿದ್ರಾವಿಡ ಜಿಕ್ನಮನೆ ತ್ಯಾಗಲಿ ಸುಂದರವಾಗಿ ನಡೆಸಿಕೊಟ್ಟರು.