ಶಿರಸಿ: ತಾಲೂಕಿನ ಹುತ್ಗಾರ್ ಶಾಲೆಯ ಆವರಣದಲ್ಲಿ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಇವರ ಆಯೋಜನೆಯಲ್ಲಿ ಫೆ. 28, ಮಂಗಳವಾರದಂದು ಸಂಜೆ 5ಗಂಟೆಯಿಂದ ಆರನೆಯ ವರ್ಷದ “ಹಳ್ಳಿಹಬ್ಬ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗುರುವಂದನೆ, ಸನ್ಮಾನ ಕಾರ್ಯಕ್ರಮ, ಯಕ್ಷಗಾನ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಹೆಗಡೆ, ನೂರನಜಡ್ಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭೂಮಾ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಎನ್. ಹೆಗಡೆ, ಇಟಗುಳಿ ಆಗಮಿಸಲಿದ್ದಾರೆ. ಹಾಗೆಯೇ ಸೇವಾ ಸಹಕಾರಿ ಸಂಘ ನಿಯಮಿತ, ಕಂಚಿಕೈ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಹೆಗಡೆ, ಸೂರನಜಡ್ಡಿ, ಟಿಎಸ್ಎಸ್ ನಿರ್ದೇಶಕ ಬಾಲಚಂದ್ರ ಹೆಗಡೆ, ಕೊಡಮೂಡ, ಗ್ರಾಮ ಪಂ. ನಿಲ್ಕುಂದ ಅಧ್ಯಕ್ಷ ರಾಜಾರಾಮ ಹೆಗಡೆ, ಬಿಳೆಕಲ್ಲು, ಸ.ಹಿ.ಪ್ರಾ.ಶಾಲೆ ಹುತ್ಗಾರ್ ಎಸ್.ಡಿ.ಎಂ.ಸಿ ಅಧ್ಯಕ್ಷ ಗಣಪತಿ ಹೆಗಡೆ, ಗಿಳಿಗುಂಡಿ ಗ್ರಾಮ ಅರಣ್ಯ ಸಮಿತಿ ಹಳ್ಳಿಬೈಲ್ ಅಧ್ಯಕ್ಷ ವಿಶ್ವನಾಥ ಹೆಗಡೆ, ಬಿಳೆಕಲ್ಲು ಗೌರವ ಉಪಸ್ಥಿತಿ ನೀಡಲಿದ್ದಾರೆ.
ಗುರುವಂದನೆಯನ್ನು ಹುತ್ಗಾರ್ ಶಾಲೆಯ ನಿಕಟಪೂರ್ವ ಶಿಕ್ಷಕಿ ಶ್ರೀಮತಿ ಆಶಾ ಜಿ.ಭಟ್ಟ, ವಾಟೆಕೊಪ್ಪ ಸ್ವೀಕರಿಸಲಿದ್ದು, 2023ನೇ ಸಾಲಿನ ಮಹಾ ಪೋಷಕರು, ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್,2020.21ನೇ ಸಾಲಿನಲ್ಲಿ ಊರಿನಲ್ಲಿ ಇಂಟರ್ನೆಟ್ ಸಂಪರ್ಕ ತರಲು ಸಹಕರಿಸಿದ ಮಹಾದಾನಿಗಳು, 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹುತ್ಗಾರ್ ಶಾಲೆಯ ಹಳೆ ವಿದ್ಯಾರ್ಥಿಗಳು ಸನ್ಮಾನ ಹಾಗೂ ಪ್ರೋತ್ಸಾಹಧನ ಸ್ವೀಕರಿಸಲಿದ್ದಾರೆ.
ರಾತ್ರಿ 10ಗಂಟೆಯಿಂದ ಸ್ಪಂದನ ಟ್ರಸ್ಟ್ ಇವರ ಸಂಯೋಜನೆಯಲ್ಲಿ ಅತಿಥಿ ಕಲಾವಿದರುಗಳ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ
‘ಕುಶ-ಲವ & ಸೀತಾವಿಯೋಗ’ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮೃದಂಗದಲ್ಲಿ ನರಸಿಂಹ ಭಟ್ಟ ಹಂಡ್ರಮನೆ. ಚೆಂಡೆಯಲ್ಲಿ ಗಜಾನನ ಹೆಗಡೆ ಸಾಂತೂರು ಸಹಕರಿಸಲಿದ್ದು, ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಸುಬ್ರಹ್ಮಣ್ಯ ಹೆಗಡೆ ಮೂರೂರು, ನಾಗೇಂದ್ರ ಭಟ್ಟ ಮೂರೂರು, ವಿನಾಯಕ ಭಟ್ಟ ಭಂಡಿವಾಳ, ಪ್ರವೀಣ ಹೆಗಡೆ ತಟ್ಟೀಸರ ಹೀಗೆ ಹಲವಾರು ಖ್ಯಾತ ಕಲಾವಿದರು ಮನರಂಜಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರೋತ್ಸಾಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.