Slide
Slide
Slide
previous arrow
next arrow

ಫೆ.27ರಿಂದ ‘ಟಿಬೇಟ್ ಹಬ್ಬ’

300x250 AD

ಮುಂಡಗೋಡ: ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ ಆಶ್ರಯದಲ್ಲಿ ಟಿಬೇಟ್ ಫೆಸ್ಟಿವಲ್ ‘ಟಿಬೇಟ್ ಹಬ್ಬ’ ಫೆಬ್ರವರಿ 27 ರಿಂದ 5 ಮಾರ್ಚರವರೆಗೆ ಮುಂಡಗೋಡ ಬಳಿ ಇರುವ ಡುಗುಲಿಂಗ್ ಟಿಬೇಟಿಯನ್ ಪುನರ್ವಸತಿ ಕೇಂದ್ರದ ಕ್ಯಾಂಪ್ ನಂ.3 ರಲ್ಲಿರುವ ಲ್ಯಾಮೋ ಶ್ಲೋಕ್ಷಾ ಮೈದಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಒಂದು ವಾರದ ಕಾಲ ನಡೆಯಲಿರುವ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ‘ಲೈವ್’ ಟಿಬೇಟಿಯನ್ ಪಾರಂಪರಿಕ ಸಂಗೀತ ಹಾಗೂ ನೃತ್ಯ ಲಾಮಾಗಳಿಂದ ‘ಮಂಡಲ’ದ ರಚನೆ, ಥಾಂಕಾ ಪೇಟಿಂಗ್, ಹಾಗು ಟಿಬೇಟಿಯನ್ ಕರಕುಶಲ ವಸ್ತುಗಳು, ಆಹಾರದ ಮಾರಾಟ ಮಳಿಗೆಗಳು ಇರಲಿವೆ. ವಿಶೇಷವಾಗಿ ಟಿಬೇಟಿಯನ್ ಪಾರಂಪರಿಕ ವೈದ್ಯಕೀಯ ಕ್ಯಾಂಪ್‌ ಹಾಗೂ ಪಾರಂಪರಿಕ ಕ್ರೀಡೆಗಳನ್ನು ಕೂಡ ಆಯೋಜಿಸಲಾಗಿದೆ.

ಟಿಬೇಟಿಯನ್ ಹಬ್ಬ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ ಟಿಬೇಟಿಯನ್ ಬುದ್ಧಿಸಂ, ಟಿಬೇಟಿಯನ್ ವೈದ್ಯಕೀಯ ಪದ್ಧತಿ, ಟಿಬೇಟಿನ ಸಧ್ಯದ ರಾಜಕೀಯ ಪರಿಸ್ಥಿತಿ ಮುಂತಾದ ವಿಷಯಗಳ ಕುರಿತಾಗಿ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.

300x250 AD

ಈ ಕಾರ್ಯಕ್ರಮದ ಮೂಲಕ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು, ಕುಶಲಕರ್ಮಿಗಳಿಗೆ ತಮ್ಮ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲು ಹಾಗೂ ಮೂಲಭೂತವಾಗಿ ಟಿಬೇಟಿಯನ್ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪೂರಕವಾಗುವಂತೆ ಅವಕಾಶ ಕಲ್ಪಿಸಲು ಯೋಚಿಸಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ವಾರದ ಕಾಲ ನಡೆಯಲಿರುವ ಟಿಬೇಟ್ ಹಬ್ಬದ ಸಂದರ್ಭದಲ್ಲಿ ಟಿಬೇಟಿಯನ್ ಕ್ಯಾಂಪ್ ಸುತ್ತಮುತ್ತಲಿನ ಪ್ರದೇಶ, ನಗರಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಠವಾದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರೋತ್ಸಾಹಿಸಬೇಕೆಂದು‌ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top