ಶಿರಸಿ: ಹಸಿರಿನ ಸಸಿಗಳೆಂದರೆ ಯಾರಿಗೇ ತಾನೇ ಇಷ್ಟವಿಲ್ಲ, ಅದರಲ್ಲಿಯೂ ಮನೆಯಂಗಳದಲ್ಲಿನ ಹಚ್ಚನೆಯ ಹಸಿರು ಮನೆಯೊಳಗೆ ಕಂಗೊಳಿಸಿದರೆ ಮನೆಯೊಡತಿಯ ಉಲ್ಲಾಸಕ್ಕೆ ಪಾರವಿಲ್ಲ. ಮನೆಯಂಗಳದಲ್ಲಿ ಕೈತೋಟ ಮಾಡುವುದು ಮಾಮೂಲು, ಆದರೆ ಮನೆಯೊಳಗೆ ಕೈತೋಟ ನಿರ್ಮಾಣ ನಿಜಕ್ಕೂ ರಮಣೀಯ.
ಪ್ರಸ್ತುತದ ಅವಶ್ಯಕತೆ, ಜನರ ಅನಿವಾರ್ಯತೆ, ಆಶಯಕ್ಕೆ ಅನುಗುಣವಾಗಿ ಇಂಡೋರ್ ಗಾರ್ಡನ್ ಕಾನ್ಸೆಪ್ಟ್ ಇದೀಗ ಎಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದೆ. ಅದರ ನಿರ್ಮಾಣಕ್ಕೆ ಆಸಕ್ತಿಯ ಜೊತೆಗೆ ಜ್ಞಾನದ ಅವಶ್ಯಕತೆಯೂ ಬೇಕು. ಹೀಗೆ ಆಸಕ್ತಿ ಮತ್ತು ವಿಷಯ ಜ್ಞಾನ ಎರಡೂ ಉಪಯೋಗಿಸಿಕೊಂಡು ಇಂಡೋರ್ ಗಾರ್ಡನ್ ಮೂಲಕ ಜಿಲ್ಲೆಯಾದ್ಯಂತ ಪ್ರಖ್ಯಾತಿ ಪಡೆದವರ ಸಾಲಿನಲ್ಲಿ ಶಿರಸಿ ತಾಲೂಕಿನ ಹೊಸಳ್ಳಿಯ ಸೀಮಾ ಹೆಗಡೆ ನಿಲ್ಲುತ್ತಾರೆ.
ಪ್ಲ್ಯಾಂಟ್ ಬಯೋಟೆಕ್ನಾಲಜಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು, ತೋಟಗಾರಿಕಾ ಕೃಷಿಯಲ್ಲಿ ನಿರತರು. ಜೊತೆಗೆ ಆಸಕ್ತಿ ವಿಷಯವಾದ ಇಂಡೋರ್ ಗಾರ್ಡನ್ ವಿಷಯದಲ್ಲಿ ರಾಜ್ಯಮಟ್ಟದಲ್ಲಿಯೂ ಸೆಮಿನಾರ್, ಪ್ರಾಜೆಕ್ಟ್ ವರ್ಕ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಸ್ತುತ ಶಿರಸಿಯಲ್ಲಿ ಫೆ.18 ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಹರಿದ್ರೇಖಾ ಕಂಪನಿ ವತಿಯಿಂದ ಇಂಡೋರ್ ಗಾರ್ಡನ್ ಪ್ಲ್ಯಾಂಟ್, ಡ್ರೈ ಮಾಸ್ ಪ್ರೇಮ್, ಸಿರಾಮಿಕ್ ಪೊಟ್ ಮಾರಾಟಕ್ಕಿದ್ದು, ಆಸಕ್ತರು ಪ್ಲ್ಯಾಂಟ್ ಗಳನ್ನು ವೀಕ್ಷಿಸಲು, ಮಾಹಿತಿ ಪಡೆಯಲು ಹಾಗು ಖರೀದಿಗೆ ಅವಕಾಶವಿದೆ.
YouTube Link: https://youtu.be/7H-MPRRPVF8