ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ, 30 ಕಸ್ತೂರ ಬಾ ಗಾಂಧಿ ವಸತಿ ಶಾಲೆ ಜೊತೆಗೆ 13ಕರ್ನಾಟಕ ಪಬ್ಲಿಕ್ ಶಾಲೆ ಹಾಗೆಯೇ 50 ಆದರ್ಶ ವಿಶ್ವವಿದ್ಯಾಲಯದಲ್ಲಿ ಹೈಟೆಕ್ ವ್ಯವಸ್ಥೆಯನ್ನು ರೂಪಿಸಲಾಗುವುದು. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಗುವುದು.
ಇದಕ್ಕಾಗಿ ರೆಫರೆನ್ಸ್ ಪುಸ್ತಕ ಪರಿಚಯಿಸಲು ನಿರ್ಧರಿಸಿದ್ದು, ಶಾಲೆಗಳಲ್ಲಿ ಗ್ರಂಥಾಲಯ, ರೀಡಿಂಗ್ ಕಾರ್ನರ್ ಸ್ಥಾಪಿಸಲಾಗುವುದು. 47 ವಸತಿ ಶಾಲೆಗಳ ದುರಸ್ತಿ ಕಾರ್ಯ ಹಾಗೂ ಸ್ಮಾರ್ಟ್ ಕ್ಲಾಸ್ ಬೋಧನೆಗೆ ಅವಕಾಶ ಕಲ್ಪಿಸಲಾಗುವುದು.
ಹಾಗೆಯೇ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಅವರ ಸಾರಿಗೆ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ.ಶಾಲಾ/ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಉಚಿತ ಬಸ್ ಪಾಸ್ ಲಭ್ಯವಿರಲಿದೆ.