Slide
Slide
Slide
previous arrow
next arrow

ದೇಶದ ಎರಡನೇ ಸ್ವಾತಂತ್ರ‍್ಯಕ್ಕೆ ಹೋರಾಡಬೇಕಿದೆ: ಮಾರ್ಗರೇಟ್ ಆಳ್ವಾ

300x250 AD

ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಬಂಧಿಸಿದ ಎಲ್ಲ ಇಲಾಖೆ ಮಂತ್ರಿಗಳ ಸಭೆ ನಡೆಸಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು.
ಕರಾವಳಿ ಪ್ರಜಾಧ್ವನಿ ಯಾತ್ರೆಯ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆನರಾ ಸಂಸದ ಅನಂತಕುಮಾರ್ ಹೆಗಡೆ ಸಂಸತ್ತಿನಲ್ಲಿ ಒಮ್ಮೆಯೂ ಮಾತನಾಡಿಲ್ಲ. ನಾನು ಸಂಸದೆ ಆಗಿದ್ದಾಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿ ನಾನೇ ಅತಿಕ್ರಮಣದಾರರ ಪರವಾಗಿ ಮಾತನಾಡಿದ್ದೆ. ಜಿಲ್ಲೆಯ ಅತಿಕ್ರಮಣದಾರರು ಏನು ಮಾಡಬೇಕು ಎಂದು ಕೇಳಿದ್ದೆ. ಉತ್ತರ ಕನ್ನಡದಲ್ಲಿ ಎಂಪಿ ಆಗಿರುವವರೆಗೂ ಒಬ್ಬರನ್ನೂ ಹೊರ ಹಾಕಲು ಅವಕಾಶ ನೀಡಿಲ್ಲ, ನೀಡುವುದಿಲ್ಲ ಎಂದು ವಾಜಪೇಯಿ ಅವರಿಗೆ ಸ್ಪಷ್ಟಪಡಿಸಿದ್ದೆ ಎಂದರು.
ಈಗ ಅನಂತಕುಮಾರ ಹೆಗಡೆ ಒಮ್ಮೆಯೂ ಸಂಸತ್ತಿನಲ್ಲಿ ಮಾತನಾಡಿಲ್ಲ. ಈಗಿನವರಿಗೆ ಬಡವರ ಮೇಲೆ ಪ್ರೀತಿ, ನ್ಯಾಯ ಕೊಡಿಸುವ ಉತ್ಸಾಹ ಇಲ್ಲ. ಚುನಾವಣೆ ವೇಳೆ 5 ಸಾವಿರ ನೀಡುತ್ತಾರೆ ಎಂದು ಮತ್ತೆ ಅವರಿಗೇ ನೀವು ಮತ ನೀಡಿದರೆ ಮುಂದೆ ಐದು ವರ್ಷ ಏನೂ ಮಾಡದ ಸ್ಥಿತಿ ಉಂಟಾಗುತ್ತದೆ. 40 ವರ್ಷದಿಂದ ಜಿಲ್ಲೆ ಅರಿತಿದ್ದೇನೆ. ನಾನು ಎಂಪಿ ಅಲ್ಲ, ಆದರೆ ನಾನು ಎಂದಿಗೂ ಬಾಯಿ ಮುಚ್ಚಲ್ಲ ಎಂದರು.
ನಾವು ಈ ದೇಶದ ಎರಡನೇ ಸ್ವಾತಂತ್ರ‍್ಯಕ್ಕೆ ಹೋರಾಡಬೇಕಿದೆ. ಧರ್ಮದ ಹೆಸರಿನಿಂದ ಹೊಟ್ಟೆ ತುಂಬುವುದಿಲ್ಲ. ಧರ್ಮದ ಹೆಸರಿನಲ್ಲಿ ಒಡೆಯುವವರ ವಿರುದ್ಧ ನಾವು ಒಂದಾಗಿ ನಿಲ್ಲಬೇಕು ಎಂದ ಅವರು, ಮಹಿಳೆಯರ ಪರವಾಗಿ ಕಾರ್ಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಮಹಿಳೆಯರ ಪ್ರಗತಿಗಾಗಿ ಬ್ಯಾಂಕ್ ಸ್ಥಾಪಿಸಿದ್ದರೂ ಅದನ್ನು ಬಿಜೆಪಿ ಮುಚ್ಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

300x250 AD
Share This
300x250 AD
300x250 AD
300x250 AD
Back to top