• Slide
    Slide
    Slide
    previous arrow
    next arrow
  • ಮೂಲಭೂತ ಸೌಕರ್ಯ ಆಗ್ರಹ: ಜಮಗುಳಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

    300x250 AD

    ಯಲ್ಲಾಪುರ: ಜಮಗುಳಿ ಗ್ರಾಮದಲ್ಲಿನ ಮೂರು ರಾಜಕೀಯ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಊರಿಗೆ ಮೌಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಇಡೀ ಊರಿನವರು ಒಂದಾಗಿದ್ದಾರೆ.
    ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಊರು ಜಮಗುಳಿ. ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಿಂದ 2ಕಿಮೀ ದೂರದಲ್ಲಿರುವ ಊರಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ಜನ ಕಳೆದ 10 ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಎಲ್ಲಾ ಕಡೆ ಮನವಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
    ಹೀಗಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಊರಿನವರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದರು. ಆಗ ಎಲ್ಲಾ ಪಕ್ಷದ ಅಭ್ಯರ್ಥಿಗಳು ಆಗಮಿಸಿ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು. ಆದರೆ, ದೇವಾಲಯದ ಆವರಣದಲ್ಲಿ ಭರವಸೆ ನೀಡಿ ಮತ ಪಡೆದು ಆಯ್ಕೆಯಾದವರು ನಂತರ ಊರಿನವರ ಅಳಲು ಆಲಿಸಿಲ್ಲ ಎಂಬುದು ಗ್ರಾಮಸ್ಥರ ದೂರು.
    ಈ ಊರು ಕಣ್ಣಿಗೇರಿ ಗ್ರಾ ಪಂ ವ್ಯಾಪ್ತಿಗೆ ಬರುತ್ತದೆ. ಆದರೆ, ಸ್ಥಳೀಯ ಸಂಸ್ಥೆಯಲ್ಲಿ ಕಾಂಕ್ರೇಟ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಅನುದಾನವಿಲ್ಲ. ಹೀಗಾಗಿ ನಾಲ್ಕು ಬಾರಿ ಶಾಸಕರಿಗೆ ಮನವಿ ಮಾಡಲಾಗಿದ್ದು, ಇದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಜನ ಅಳಲು ತೋಡಿಕೊಂಡರು.

    ಈ ಗ್ರಾಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರಿದ್ದು, ಚುನಾವಣೆ ವೇಳೆ ಅವರು ಮತ ಕೇಳಲು ಹೋದಾಗ ಮತದಾರರು ರಸ್ತೆಯ ಬಗ್ಗೆ ಪ್ರಶ್ನಿಸಿರುವುದು ಅವರ ಮುಜುಗರಕ್ಕೆ ಕಾರಣವಾಯಿತು. ಹೀಗಾಗಿ ಮೂರು ಪಕ್ಷದ ಕಾರ್ಯಕರ್ತರು ಸಭೆ ಸೇರಿ ಚುನಾವಣಾ ಬಹಿಷ್ಕಾರದ ಬಗ್ಗೆ ನಿರ್ಧರಿಸಿದರು. ಗ್ರಾಮದ ಪ್ರತಿ ಮನೆಗೆ ತೆರಳಿ, ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಅವರ ಮನವೊಲೈಸಿದರು. ಊರಿನ ಹಿರಿಯರು, ಮಹಿಳೆಯರು ಅವರ ಬೆಂಬಲಕ್ಕೆ ನಿಂತರು. ಇದೀಗ ಎಂಟು ದಿನಗಳ ಹಿಂದೆ 55 ಮನೆಯ 300ರಷ್ಟು ಮತದಾರರು ಸೇರಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ನ್ನು ಊರ ಪ್ರವೇಶ ದ್ವಾರದ ಬಳಿ ಅಳವಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top