Slide
Slide
Slide
previous arrow
next arrow

ಎಚ್‌ಡಿಕೆಗೆ 3 ಕ್ವಿಂಟಲ್ ತೂಕದ ಅಡಿಕೆ ಹಾರ ಹಾಕಿ ಸ್ವಾಗತಿಸಿದ ಕಾರ್ಯಕರ್ತರು

300x250 AD

ಕುಮಟಾ: ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ರಾತ್ರಿ ಆಗಮಿಸಿದ ಪಂಚರತ್ನ ರಥಯಾತ್ರೆಗೆ ಸಹಸ್ರಾರು ಜನರು ಅದ್ಧೂರಿ ಸ್ವಾಗತ ಕೋರುವ ಮೂಲಕ ಈ ನಾಡಿನ ಕಲೆ, ಸಂಸ್ಕೃತಿಯನ್ನು ಸಾರುವ ಬೃಹತ್ ಅಡಿಕೆ ಮಾಲೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತೊಡಿಸಿ, ಗೌರವಿಸಿದರು.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿದ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತ್ತಿದ್ದು, ಹಳ್ಳಿ ಹಳ್ಳಿಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಸುಗ್ಗಿ, ಯಕ್ಷಗಾನ ಕಲೆಯನ್ನು ಸಾರುವ ಮತ್ತು ವಿವಿಧ ಸಾವಯವ ತರಕಾರಿ, ಹಣ್ಣುಗಳಿರುವ ಬೃಹತ್ ಮಾಲೆಯನ್ನು ತೊಡಿಸಲಾಯಿತು. ಅದರಂತೆ ಕಾಗಲ್‌ನಲ್ಲಿ ಮೂರು ಕ್ವಿಂಟಲ್ ಅಡಿಕೆ ಮಾಲೆಯನ್ನು ಕುಮಾರಸ್ವಾಮಿಗೆ ಹಾಕುವ ಮೂಲಕ ಗೌರವಿಸಲಾಯಿತು. ಅಲ್ಲದೇ ಹಳ್ಳಿ ಹಳ್ಳಿಗಳಲ್ಲಿ ಕುಮಾರಣ್ಣನಿಗೆ ಜಯ ಘೋಷ ಮೊಳಗುವ ಮೂಲಕ ಕ್ಷೇತ್ರದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿ ಅವರ ಗಮನ ಸೆಳೆಯುವ ಜೊತೆಗೆ ಮುಂಬರುವ ದಿನಗಳಲ್ಲಿ ಕುಮಾರಣ್ಣ ಸಿಎಂ ಆಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಜೆಡಿಎಸ್ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳನ್ನು ಈಗಿನ ಬಿಜೆಪಿ ಸರ್ಕಾರ ಕೈಬಿಟ್ಟ ಕಾರಣ ಬಡ ಜನರಿಗೆ, ರೈತರಿಗೆ ತೀರಾ ಸಮಸ್ಯೆಯಾಗಿದೆ. ಯಾವುದೇ ಸರ್ಕಾರ ಬರಲಿ ಆದರೆ ಜನಪರ ಯೋಜನೆಗಳನ್ನು ಮುಂದುವರೆಸುವ ಮೂಲಕ ಜನರಿಗೆ ಆಸರೆಯಾಗಬೇಕೆಂಬುದೇ ನಮ್ಮ ಆಶಯ. ಆದರೆ ಈಗಿನ ಬಿಜೆಪಿ ಸರ್ಕಾರಕ್ಕೆ ಜನರ ಕಲ್ಯಾಣಕ್ಕಿಂತ ಲೂಟಿ ಹೊಡೆಯುವುದರಲ್ಲೆ ಮುಳುಗಿರುವುದು ಬೇಸರದ ಸಂಗತಿಯಾಗಿದೆ. ಹಾಗಾಗಿಯೇ ಜನರಿಗೆ ಜೆಡಿಎಸ್ ಬಗ್ಗೆ ವಿಶ್ವಾಸ ಮೂಡುವಂತಾಗಿದೆ. ಈ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಬರಲಿದೆ. ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಮೂಲಕ ಜನರ ಕಲ್ಯಾಣಕ್ಕಾಗಿಯೇ ದುಡಿಯಲಾಗುವುದು. ನೀವೆಲ್ಲ ಜೆಡಿಎಸ್‌ನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಮಾತನಾಡಿ, ಬಡ ಮೀನುಗಾರ ಪರೇಶ ಮೇಸ್ತಾನ ಪ್ರಕರಣದಲ್ಲಿ ಬಿಜೆಪಿ ನನ್ನನ್ನು ಬಳಸಿಕೊಂಡು ಜೈಲಿಗೆ ಅಟ್ಟುವ ಕೆಲಸ ಮಾಡಿದರು. ನ್ಯಾಯಕ್ಕಾಗಿ ಹೊರಾಡಿದ ನನಗೆ ಸೆರೆಮನೆ ವಾಸ ಎದುರಾಯಿತು. ಇದರಿಂದ ನೋವು ಉಂಡ ನಾನು ಸುಮ್ಮನಾಗಿದ್ದೆ. ಆ ಸಂದರ್ಭದಲ್ಲಿ ನನ್ನನ್ನು ಕರೆದು, ಧೈರ್ಯ ತುಂಬಿದವರು ಕುಮಾರಣ್ಣ. ಜನರಿಗಾಗಿ ದುಡಿಯುತ್ತಿರುವ ನೀವು ಜನರ ಸಮೀಪದಲ್ಲೆ ಇರಬೇಕು. ಅವರ ಕಣ್ಣೀರು ಒರೆಸುವ ಕಾಯಕ ಮಾಡಬೇಕೆಂದು ನೈತಿಕ ಬೆಂಬಲ ನೀಡಿದರು. ಹಾಗಾಗಿ ಇಂದು ಅವರ ಮಾರ್ಗದರ್ಶನದಲ್ಲಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣತೊಟ್ಟು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ. ನೀವೆಲ್ಲರೂ ನನ್ನನ್ನು ಆಶೀರ್ವದಿಸಿ ಹರಸಬೇಕು. ಒಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ಕಲ್ಪಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಕುಮಟಾ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ, ಪ್ರಮುಖರಾದ ಜಿ ಕೆ ಪಟಗಾರ, ಬಲೀಂದ್ರ ಗೌಡ, ಸತೀಶ ಮಹಾಲೆ, ರಾಜು ಮಾಸ್ತಿಹಳ್ಳ, ಮಹೇಂದ್ರ ನಾಯ್ಕ, ಅಣ್ಣಪ್ಪ ನಾಯ್ಕ, ಸಂಪತಕುಮಾರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top