ಕೊಲಂಬೊ: ಬಿಕ್ಕಟ್ಟಿನ ಸಮಯದಲ್ಲಿ ಭಾರತವು ದ್ವೀಪ ರಾಷ್ಟ್ರದ ಅತಿದೊಡ್ಡ ಸ್ನೇಹಿತ ಎಂದು ಶ್ರೀಲಂಕಾದ ಪ್ರಧಾನಿ ದಿನೇಶ್ ಗುಣವರ್ಧನಾ ಹೇಳಿದ್ದಾರೆ. ಶ್ರೀಲಂಕಾ ಕಳೆದ ವರ್ಷ ತಾನು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದೆ. 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಮೊದಲ ಬಾರಿಗೆ ಶ್ರೀಲಂಕಾ USD 51 ಶತಕೋಟಿ ವಿದೇಶಿ ಸಾಲಗಳನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿತು.
ಕೊಲಂಬೊದಲ್ಲಿ ನಡೆದ ಟಾಟಾ ಟಿಸ್ಕಾನ್ ಡೀಲರ್ ಕನ್ವೆನ್ಷನ್ 2023 ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಗುಣವರ್ಧನೆ, ಶ್ರೀಲಂಕಾದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಭಾರತೀಯ ಕಂಪನಿಗಳಿಗೆ ಕರೆ ನೀಡಿದರು.ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಶ್ರೀಲಂಕಾದ ದೊಡ್ಡ ಸ್ನೇಹಿತ ಎಂದು ಅವರು ಹೇಳಿರುವುದಾಗಿ ಕೊಲಂಬೊ ಗೆಜೆಟ್ ಪೋರ್ಟಲ್ ವರದಿ ಮಾಡಿದೆ.
ಶ್ರೀಲಂಕಾದಲ್ಲಿ ಭಾರತೀಯ ಹೂಡಿಕೆಯ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಿ ಗುಣವರ್ಧನೆ, ಲಂಕಾ ಅಶೋಕ್ ಲೇಲ್ಯಾಂಡ್ ಬಳಸುವ ಶೇಕಡ 90 ರಷ್ಟು ಘಟಕಗಳು ಸ್ಥಳೀಯವಾಗಿವೆ ಎಂದಿದ್ದಾರೆ.
ಕೃಪೆ: http://news13.in