Slide
Slide
Slide
previous arrow
next arrow

ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

300x250 AD

ಸಿದ್ದಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಪಟ್ಟಣ ಪಂಚಾಯತ ಸದಸ್ಯ ನಂದನ ಬೋರಕರ ಮಾತನಾಡಿ ಬೇರೆ ಭಾಷೆ ಪ್ರೀತಿಸಿ, ಆದರೆ ಮಾತ್ರ ಭಾಷೆಯನ್ನು ಪ್ರೀತಿಸಿ ಉಳಿಸಿ ಬೆಳಸೋಣ. ಸಮ್ಮೇಳನದಲ್ಲಿ ನನಗೆ ಕೊಟ್ಟಿರುವ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಸಮ್ಮೇಳನದ ಯಶಸ್ಸಿಗೆ ಎಲ್ಲರು ಜೊತೆಯಾಗಿ ಸಹಕರಿಸೋಣ ಎಂದರು.

ತಾಲೂಕು ಪರ್ತಕರ್ತ ಸಂಘದ ಅಧ್ಯಕ್ಷ ಗಂಗಾಧರ ಕೋಳಗಿ ಮಾತನಾಡಿ ಕನ್ನಡ ಸಾಹಿತ್ಯ ರಚನೆ ಜೊತೆಗೆ ಸಂಭ್ರಮಿಸುವ ಕೆಲಸ ಸಮ್ಮೇಳನದಿಂದ ಸಾಧ್ಯ. ಕೇವಲ ಹಬ್ಬವಲ್ಲ ಮೌಲ್ಯಗಳ ಚರ್ಚೆಯಾಗುತ್ತದೆ. ಎಲ್ಲರ ಬೆಂಬಲದಿಂದ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ.  ಸಮ್ಮೇಳನ ಯಶಸ್ವಿಯಾಗುತ್ತದೆ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.

ನಿಕಟಪೂರ್ವ ಕಸಪಾ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಆಮಂತ್ರಣ ಬಿಡುಗಡೆ ಸಮ್ಮೇಳನದ ಪ್ರಚಾರದ ಒಂದು ಭಾಗವಾಗಿದೆ. ತ್ವರಿತವಾಗಿ ಜನರಿಗೆ ಆಮಂತ್ರಣ ತಲುಪುವಂತಾಗಬೇಕು. ಸಮ್ಮೇಳನದ ಕೆಲಸ ಕಾರ್ಯ ಹೆಚ್ಚಿನ ವೇಗವನ್ನು ಪಡೆದುಕೊಳ್ಳಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಬೇಕಾಗಿದೆ ಎಂದರು.

300x250 AD

ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿಪ್ರಶಾಂತ ರಾವ ಮಾತನಾಡಿ ಮಾತ್ರು ಭಾಷೆಗೆ ಸೇವೆ ಮಾಡಲು ಸದಾವಕಾಶ, ಕನ್ನಡದ ಮೇಲೆ ಆಭಿಮಾನ ಇದ್ದರೇ ಉಳಿಸಿ ಬೆಳಸಲು ಸಾಧ್ಯ. ನಮ್ಮ ಇಲಾಖೆಯಿಂದ ಸಹಕಾರ ಸದಾ ಇರುತ್ತದೆ ಎಂದರು.ತಾಲೂಕ ಕಸಾಪ ಕೋಶಾಧ್ಯಕ್ಷರಾದ ಪಿ.ಬಿ.ಹೊಸೂರು ಮಾತನಾಡಿ ಎಲ್ಲರೂ ಸಹಕರಿಸಬೇಕು, ಎಂದರು.

ಕಸಾಪ ತಾಲೂಕಾಧ್ಯಕ್ಷ ಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮ್ಮೇಳನಕ್ಕೆ ಸಮಯದ ಅಭಾವ ಇದೆ. ಹಿಂದಿನ ಎಲ್ಲಾ ಸಮ್ಮೇಳನ ಯಶಸ್ವಿಯಾಗಿದ್ದರಿಂದ ಈ ಸಮ್ಮೇಳನ ಯಶಸ್ವಿಯಾಗುತ್ತದೆ. ಸಲಹೆ ಸಹಕಾರ ನೀಡಬೇಕು, ನಮ್ಮ ನಿಮ್ನೇಲ್ಲರ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ಎಂ.ಕೆ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಶಿರಳಗಿ ಅಣ್ಣಪ್ಪ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top