ಕಾರವಾರ: ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿಗೆ ಈವರೆಗೂ ಸೀಮೆಎಣ್ಣೆ ಪರ್ಮಿಟ್ ಕಾರ್ಡ್ಗಳನ್ನು ಪಡೆಯದೇ ಇರುವ ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮಾಲಕರು ಈ ಕೂಡಲೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಂದ ಮಾನ್ಯತೆಗೊಂಡ ಸೀಮೆಎಣ್ಣೆ ಪರ್ಮಿಟ್ ಕಾರ್ಡ್ಗಳನ್ನು ಪಡೆಯುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.