Slide
Slide
Slide
previous arrow
next arrow

ಗುರುತಿನ ಚೀಟಿ ವಿತರಣೆಯಲ್ಲಿ ಗೊಂದಲ; ಅಧಿಕಾರಿಯ ವಿರುದ್ಧ ಆಕ್ರೋಶ

300x250 AD

ದಾಂಡೇಲಿ: ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಯ ಚುನಾವಣೆಗೆ ಮತದಾರರ ನೋಂದಣಿ ಅಧಿಕಾರಿಯಾಗಿರುವ ಇಸ್ಮಾಯಿಲ್ ಖಲೀಲುಲ್ಲಾ ಅವರು ಗುಂಪುಗಾರಿಕೆ ಮಾಡುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತದಾರರ ಗುರುತಿನ ಚೀಟಿಯನ್ನು ವಿತರಿಸಲು ಸಂಬoಧಪಟ್ಟವರು ಸೂಕ್ತ ನಿರ್ದೇಶನ ನೀಡಬೇಕೆಂದು ಅಂಜುಮನ್ ಫಲಾವುಲ್ ಸಂಸ್ಥೆಯ ಮಾಜಿ ಅಧ್ಯಕ್ಷ ತಸ್ವರ್ ಸೌದಾಗರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಸಂಸ್ಥೆಗೆ ಸಂಬoಧಿಸಿದ ಮಸೀದಿಗಳ ವ್ಯಾಪ್ತಿಗೆ ಬರುವ ಮುಸ್ಲಿಮರು ಈಗಾಗಲೆ ಸಂಸ್ಥೆಯ ಸಾಮಾನ್ಯ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿ, ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಅಂತಿಮ ಮಾಡಲಾಗಿದ್ದು, ಇದೀಗ ಮತದಾರರ ಗುರುತಿನ ಚೀಟಿ ವಿತರಣೆ ಕಾರ್ಯ ಆರಂಭವಾಗಿದೆ. ಆದರೆ ಮತದಾರರ ನೋಂದಣಿ ಅಧಿಕಾರಿ ಇಸ್ಮಾಯಿಲ್ ಖಲೀಲುಲ್ಲಾ ಅವರು ತಮಗೆ ಮನಸ್ಸಿಗೆ ಬಂದoತೆ ಮತದಾರರ ಗುರುತಿನ ಚೀಟಿಯನ್ನು ನ್ಯಾಯಬದ್ಧವಾಗಿ ವಿತರಣೆ ಮಾಡದಿರುವುದರಿಂದ ಗೊಂದಲ ಏರ್ಪಟ್ಟಿದೆ. ನಿಯಮ ಪ್ರಕಾರವಾಗಿ ಮತದಾರರ ಗುರುತಿನ ಚೀಟಿಯನ್ನು ವಿತರಿಸದೇ, ಸಂಬoಧಪಡದ ವ್ಯಕ್ತಿಯ ಕೈಯಲ್ಲಿ ಕೊಟ್ಟಿರುವುದು ಖಲೀಲುಲ್ಲಾ ಅವರ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ದೂರಿದರು.
ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಸದಸ್ಯ ಬಸೀರ್ ಗಿರಿಯಾಳ ಮಾತನಾಡಿ, ಇಸ್ಮಾಯಿಲ್ ಖಲೀಲುಲ್ಲಾ ಅವರು ತಮಗೆ ಮನಸ್ಸಿಗೆ ಬಂದoತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಒಬ್ಬ ಅಧಿಕಾರಿಯಾಗಿ ಗುಂಪುಗಾರಿಕೆಗೆ ಅವಕಾಶ ನೀಡುವುದು ಸರಿಯಲ್ಲ. ಮೇಲಾಧಿಕಾರಿಗಳು ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರುಗಳಾದ ಮಹಮ್ಮದ್ ಶರೀಪ್ ಜಾತಿಗಾರ್, ಮದರ್ ಸಾಬ್ ತೋಟಗಟ್ಟಿ, ಮಹಮ್ಮದ್ ಗೌಸ್ ಬೆಟಗೇರಿ, ಮಹಮ್ಮದ್ ಗೌಸ್ ಖತೀಬ್, ಮಹಮ್ಮದ್ ಗೌಸ್ ಪಟೇಲ್ ಇದ್ದರು.

300x250 AD
Share This
300x250 AD
300x250 AD
300x250 AD
Back to top