ಕಾರವಾರ: ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ‘ನಮ್ಮ ಕಾರವಾರ’, ನೆಹರು ಯುವ ಕೇಂದ್ರ ಸಂಘಟನೆ ಸಹಯೋಗದೊಂದಿಗೆ ಬಾಡದ ಪ್ರೀಮಿಯರ್ ರಮಾಬಾಯಿ ಹನುಮಂತ ಬೆಣ್ಣೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿವಿಧ ಸ್ಪರ್ಧೆಗಳು ನಡೆದವು.
ಕರಾವಳಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಹಾಗೂ ಕಾರವಾರದ ದೀಪ್ತೀಸ್ ಕೆಫೆ ಪ್ರಾಯೋಜಕತ್ವದಲ್ಲಿ ಚಿತ್ರಕಲೆ, ಸಾಬೂನಿನಲ್ಲಿ ಕೆತ್ತನೆ, ರಂಗೋಲಿ, ಗಾಳಿಪಟ ತಯಾರಿ, ಪ್ರಬಂಧ, ಭಾಷಣ, ರಸಪ್ರಶ್ನೆ ಮತ್ತು ಚೆಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ 6ರಿಂದ 10ನೇ ತರಗತಿಯವರೆಗಿನ 120ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂತಿಮವಾಗಿ 7ನೇ ತರಗತಿಯ ಸುಯಾಂಶ್ ನಾಯ್ಕ್ ಮತ್ತು 9ನೇ ತರಗತಿಯ ಸಾಕ್ಷಿತಾ ಗುನಳ್ಳಿ ‘ಅತ್ಯುತ್ತಮ ಯುವ ಕಲಾವಿದ’ ಪ್ರಶಸ್ತಿ ಪಡೆದರೆ, 9ನೇ ತರಗತಿಯ ಅಥರ್ವ ಭಂಡಾರಿ ‘ಅತ್ಯುತ್ತಮ ಯುವ ಕ್ರಿಯಾತ್ಮಕ ಕಲಾವಿದ’, 6ನೇ ತರಗತಿಯ ಧನ್ಯ ನಾಯಕ್ ಮತ್ತು 8ನೇ ತರಗತಿಯ ಇಶಾ ರೇವಣಕರ್ ‘ಅತ್ಯುತ್ತಮ ಯುವ ರಂಗೋಲಿ ಕಲಾವಿದ’ ಪ್ರಶಸ್ತಿ, 9ನೇ ತರಗತಿಯ ಗುರುರಾಜ್ ಅಂಕೋಲೇಕರ್ ಅತ್ಯುತ್ತಮ ಯುವ ಕಲಾಕಾರ ಪ್ರಶಸ್ತಿ, 7ನೇ ತರಗತಿಯ ಕೃತಾರ್ಥ್ ನಾಯಕ್ ಮತ್ತು 8ನೇ ತರಗತಿಯ ವೈಭವ್ ಅಂಕೋಲೆಕರ್ ‘ಬೆಸ್ಟ್ ಯೂಥ್ ಮೈಂಡ್ಸ್’ ಪ್ರಶಸ್ತಿ, 6ನೇ ತರಗತಿಯ ಪ್ರಿತಾಲ್ ಮತ್ತು 9ನೇ ತರಗತಿಯ ಸಂಜಯ್ ‘ಅತ್ಯುತ್ತಮ ಯುವ ಪ್ರಬಂಧಕಾರ’ ಪ್ರಶಸ್ತಿ, 8ನೇ ತರಗತಿಯ ರವಿ ‘ಅತ್ಯುತ್ತಮ ಯುವ ಚೆಸ್ ಮಾಸ್ಟರ್’ ಪ್ರಶಸ್ತಿಯನ್ನು ಪಡೆದುಕೊಂಡರು.
ಸ್ಪರ್ಧೆ ಆಯೋಜನೆಗೆ ಸಹಕರಿಸಿದ ಜಿಲ್ಲಾ ಯುವ ಅಧಿಕಾರಿ ಯಶವಂತ್ ಯಾದವ್, ಶಾಲಾ ಮುಖ್ಯ ಶಿಕ್ಷಕ ಪ್ರತಾಪ್ ಜಿ. ಕರಾವಳಿ ಇನ್ಸ್ಟಿಟ್ಯೂಟ್ ಆನಂದ್ ತಾಮ್ಸೆ, ದೀಪ್ತೀಸ್ ಕೆಫೆ ಮಾಲಕ ದೀಪಕ್ ಪಾವಸ್ಕರ್, ಕಲಾ ಶಿಕ್ಷಕ ಗಣೇಶ್ ವಾಜಂತ್ರಿ ಅವರಿಗೆ ಹಾಗೂ ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ಭಾಗವಹಿಸಿದ್ದ ಚೇತನಾ, ಶ್ರೀಗಣೇಶ್, ರಾಹಿ, ತೈರೀನ್, ರಾಘವಿ, ಸಾಹಿಲ್, ಸಂಜನಾ, ಓಂಕಾರ್, ಶರೋನ್, ಖುಷಿ, ಶ್ರದ್ಧಾ ಮತ್ತು ಎಲ್ಲಾ ವಿಜೇತರಿಗೆ ‘ನಮ್ಮ ಕಾರವಾರ’ ತಂಡದ ಮುಖ್ಯಸ್ಥ ಸ್ವರೂಪ ತಳೇಕರ ಅಭಿನಂದಿಸಿದ್ದಾರೆ.