Slide
Slide
Slide
previous arrow
next arrow

ಜಾಲಿಯಲ್ಲಿ ನೂತನ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ

300x250 AD

ಭಟ್ಕಳ: ತಾಲುಕು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಇಲ್ಲಿನ ಜಾಲಿಯಲ್ಲಿ ಶಾಸಕ ಸುನೀಲ ನಾಯ್ಕ ಶನಿವಾರದಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರಿ ಕಾಲೇಜಿಗೆ ಒಂದು ಸುಸಜ್ಜಿತ ಕಟ್ಟಡದ ಅವಶ್ಯಕತೆಯು ಬಹು ವರ್ಷದ ಬೇಡಿಕೆಯಾಗಿದ್ದು, ಈಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನೂಕೂಲ ಸಿಕ್ಕಿರುವುದು ಸಂತಸವಾಗಿದೆ. ಇದು ಶಾರದಾಂಬೆಯ ದೇಗುಲ ಸನ್ನಡತೆಯಿಂದ ನಡೆದುಕೊಳ್ಳಬೇಕು. ಅಂದು ಮಾಜಿ ಶಾಸಕ ಶಿವಾನಂದ ನಾಯ್ಕ ಅವರ ಅವಧಿಯಲ್ಲಿ ಆಗಿರುವ ಕೆಲಸವನ್ನು ನೆನಪಿಸಿಕೊಳ್ಳಬೇಕು. ಪ್ರಥಮ ದರ್ಜೆ ಕಾಲೇಜು, ವಸತಿ ಶಾಲೆ ಸೇರಿದಂತೆ ಸಾಕಷ್ಟು ಶಿಕ್ಷಣಕ್ಕೆ ಕನಸು ಕಂಡು ಕೊಡುಗೆ ನೀಡಿರುವ ಅವರ ಸಾಧನೆ ಹಾಗೂ ಅವರ ಸೇವೆಯನ್ನು ನಾವು ನೆನಪಿಸಿಕೊಳ್ಳಲೇಬೇಕು. ಆದರೆ ನಾನು ಎಲ್ಲಾ ಶಿಕ್ಷಣದ ಕಟ್ಟಡಕ್ಕೆ ಬಾಡಿಗೆಯಿಂದ ಮುಕ್ತಗೊಳಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಸಂಕಲ್ಪ ಮಾಡಿದ್ದಂತೆ ಎಲ್ಲವನ್ನು ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡುತ್ತಾ ಬಂದಿದ್ದೇನೆ. ಶಿಕ್ಷಣದ ಕ್ರಾಂತಿಯ ಜೊತೆಗೆ ವಿವಿಧ ಕಾಲೇಜಿನ ಕಟ್ಟಡವನ್ನು ನಿರ್ಮಿಸಿ ಶಿಕ್ಷಣ ಕಾರಿಡಾರ್ ವ್ಯವಸ್ಥೆಯ ಕನಸು ನನಸ್ಸಾಗುತ್ತಿದೆ. ಇನ್ನೇನು ಸ್ವಲ್ಪ ದಿನದಲ್ಲಿ ನಾರಾಯಣ ಗುರು ವಸತಿ ಶಾಲೆ ಹಾಗೂ ಸರಕಾರಿ ಕಾನೂನು ಶಾಲೆಯ ಕಟ್ಟಡ ಸಹ ಇದೇ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಆಗಲಿದೆ ಎಂದ ಅವರು.
ಸದ್ಯ ಕಟ್ಟಡದ ವ್ಯವಸ್ಥೆಯಾದ ಬಳಿಕ ಈಗ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಬೋದಕ ವ್ರಂದವು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುವಂತೆ ಉತ್ತಮ ಬೋಧನೆಯನ್ನು ಮಾಡಬೇಕು. ಮುಂದಿನ ವರ್ಷದಲ್ಲಿ 1 ಸಾವಿರಕ್ಕೂ ವಿದ್ಯಾರ್ಥಿಗಳ ದಾಖಲಾತಿಯಾಗುವಂತೆ ಮಾಡಬೇಕಾಗಿದೆ. ಒಂದು ಕಾಲ ಇತ್ತು ಅಂದು ನಾನು ಶಾಸಕನಾಗಿಲ್ಲದ ಸಮಯದಲ್ಲಿ ಸರಕಾರಿ ಕಾಲೇಜಿನಲ್ಲಿ ನಮ್ಮ ಮಕ್ಕಳಿಗೆ ಒಂದು ದಾಖಲಾತಿ ನೀಡುವಂತೆ ನನ್ನ ಬಳಿ ಮಾತನಾಡಲು ಪಾಲಕರು ಕೇಳಿಕೊಳ್ಳುತ್ತಿದ್ದರು. ಆ ದಿನ ಈಗ ಮತ್ತೆ ಮರುಕಳಿಸಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಹುಲಿ ಸಿಂಹಯAತೆ ಬದುಕುಬೇಕು. ನಿಮ್ಮಿಂದ ಸಮಾಜಕ್ಕೆನಾದರು ಕೊಡುಗೆ ನೀಡುವುದರ ಜೊತೆಗೆ ನಿಮ್ಮ ಕನಸು ಈಡೇರಿಸಿಕೊಳ್ಳುವತ್ತ ಗಮನ ಇರಬೇಕು. ನಾನು ಪ್ರೌಢಶಾಲೆ ವೇಳೆಯಲ್ಲಿ ಅತೀ ಹೆಚ್ಚು ಬಾರಿ ತರಗತಿಯಿಂದ ಹೊರಗೆ ಹಾಕಲ್ಪಟ್ಟವನಾಗಿದ್ದು, ಆದರೆ ನನ್ನ ಉದ್ದೇಶ ನನ್ನ ಗುರಿಗಳತ್ತ ಗಮನ ಹರಿಸಿದ ಕಾರಣ ಇಂದು ಶಾಸಕನಾಗಿದ್ದೇನೆ. ವಿವೇಕಾನಂದರ ವಾಣಿಯಂತೆ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ. ಜ್ಞಾನ ಜಗತ್ತನ್ನು ಆಳುತ್ತಿದೆ ಹೊರತು ಹಣವಲ್ಲ. ಭಾರತವು ಹೇಗೆ ಜ್ಞಾನದಿಂದ ಈಗ ಜಗತ್ತು ಆಳುತ್ತಿದೆ ಅದರಂತೆ ದೇಶದ ಹೆಸರು ಉಳಿಸುವತ್ತ ಕೆಲಸ ಮಾಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆ, ಹಾಗೂ ಉತ್ತಮ ಆಸಕ್ತಿದಾಯಕ ಬದುಕು ಕಟ್ಟಿಕೊಳ್ಳಬೇಕು ಎಂದರು.
ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆಗಳ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಸಾಕಷ್ಟು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದ್ದು, ಈಗ ನೂತನ ಕಟ್ಟಡಕ್ಕೆ ಬಂದಿರುವುದು ಸಂತಸವಾಗಿದೆ. ಕಾಲೇಜಿನ ಕಟ್ಟಡ ನಮ್ಮ ಮನೆಯೆಂಬಂತೆ ವಿದ್ಯಾರ್ಥಿಗಳು ಕಾಪಾಡಿಕೊಳ್ಳಬೇಕು. ಕಾರಣ ಈ ಹಿಂದೆ ರಂಗೀನಕಟ್ಟೆಯಲ್ಲಿದ್ದ ವೇಳೆ ಕಾಲೇಜಿನ ವಸ್ತುಗಳನ್ನು ಹಾಳು ಮಾಡುವಂತಹ ಘಟನೆ ನಡೆದಿರುವುದು ಬೇಸರ ತಂದಿತ್ತು. ವಿದ್ಯಾರ್ಥಿಗಳಲ್ಲಿನ ಸಿಟ್ಟನ್ನು ಉದ್ವೇಗವನ್ನು ದೇಶ ಕಟ್ಟಲು ಉತ್ತಮ ಪ್ರಜೆಯಾಗಲು ಬಳಸಿಕೊಳ್ಳಿ. ಶಿಕ್ಷಕ, ಶಿಕ್ಷಕಿಯರನ್ನು, ತಂದೆ ತಾಯಿಯನ್ನು ಗೌರವಿಸಬೇಕು ಅವರನ್ನು ಅನಾಥಾಶ್ರಮಕ್ಕೆ ಸೇರಿಸದೇ ನೀವೇ ಅವರನ್ನು ನೋಡಿಕೊಳ್ಳಬೇಕು ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇಯ ಪ್ರಾಂಶುಪಾಲ ಐ.ಆರ್.ಖಾನ್ ಮಾತನಾಡಿ, ಕಾಲೇಜಿನ ಮೇಲಿನ ಪ್ರೀತಿಯಿಂದ ನಾನು ಇಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅಂದು ಬಾಡಿಗೆ, ಸಿಬ್ಬಂದಿಗಳು, ಪೀಠೋಪಕರಣದ ಕೊರತೆಯಿಂದ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ಈಗ ಸ್ವಂತ ಕಟ್ಟಡದ ನಿರ್ಮಾಣ ಆಗಿರುವುದಕ್ಕೆ ಅದಕ್ಕೆ ಶ್ರಮಿಸಿದ ಶಾಸಕ ಸುನೀಲ ನಾಯ್ಕ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದ ಅವರು ಅಂದು ಸುಧೀಂದ್ರ ಕಾಲೇಜು ಹಾಗೂ ಅಂಜುಮಾನ್ ಕಾಲೇಜುನಲ್ಲಿ ಪರೀಕ್ಷೆ ನಡೆಸಿದ್ದೇವೆ ಎಂದು ಸ್ಮರಿಸಿಕೊಂಡು.
ನನ್ನ ಅವಧಿಯಲ್ಲಿ 18 ಕಾಲೇಜಿನಲ್ಲಿ ಕೆಲಸ ಮಾಡಿದ್ದೇನೆ ಅದರಲ್ಲಿ ಭಟ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಗಿದೆ. ಸದ್ಯ ಪ್ರಾಂಶುಪಾಲರಾಗಿರುವ ಡಾ. ಶ್ರೀಮತಿ ಭಾಗೀರಥಿ ನಾಯ್ಕ ಅವರಂತಹ ಉತ್ತಮ  ಪ್ರಾಂಶುಪಾಲರನ್ನು ನಾನು ನೋಡಿಲ್ಲ. ಸದ್ಯ ಅವರ ವರ್ಗಾವಣೆಯನ್ನು ತಡೆಹಿಡಿದು ಇದೇ ಕಾಲೇಜಿನಲ್ಲಿ ಮುನ್ನಡೆಯುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಮ್.ಆರ್.ನಾಯ್ಕ ಮಾತನಾಡಿ, ನಿಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಿ. ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದ ಅವರು ಶಿಕ್ಷಣಕ್ಕಾಗಿ ಶಿಕ್ಷಕರಿಂದ ವಿದ್ಯಾರ್ಥಿಗಳು ಪೆಟ್ಟು ನೀಡಿದರು ಪರವಾಗಿಲ್ಲ. ಆದರೆ ಮುಂದೆ ಪೊಲೀಸರಿಂದ ಸಮಾಜಕ್ಕೆ ಮಾರಕರಾಗಿ ಪೆಟ್ಟು ತಿನ್ನಲು ಹೋಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನೋರ್ವ ಕಾಲೇಜು ಮಂಡಳಿ ಸದಸ್ಯ ಡಿ.ಬಿ. ನಾಯ್ಕ, ಕಟ್ಟಡದ ಸದುಪಯೋಗ ಪಡಿಸಿಕೊಳ್ಳಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಜ್ಞಾನಾರ್ಜನೆಗೆ ಬಂದಿರುವ ಕೆಲಸವನ್ನು ಉತ್ತಮವಾಗಿ ಮಾಡುವತ್ತ ಗಮನ ಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಭಾಗೀರಥಿ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ಶಾಸಕ ಸುನೀಲ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಪಡೆಗಳ ಅಧ್ಯಕ್ಷ ಗೋವಿಂದ ನಾಯ್ಕ ಸೇರಿದಂತೆ ಕಾಲೇಜು ಕಟ್ಟಡಕ್ಕೆ ಶ್ರಮಿಸಿದ ಗಣ್ಯರನ್ನು ಕಾಲೇಜು ಮಂಡಳಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರವಿ ನಾಯ್ಕ ಜಾಲಿ, ಡಾ.ರವಿ ನಾಯ್ಕ, ರಾಜೇಶ ನಾಯ್ಕ, ಧನ್ಯಕುಮಾರ ಜೈನ್ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಜಾಲಿ ಪಟ್ಟಣ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top