Slide
Slide
Slide
previous arrow
next arrow

ದಿವ್ಯಾಂಗರು ತಮ್ಮಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿಕೊಂಡು ಮುನ್ನಡೆಯಿರಿ : ದಿನಕರ ಶೆಟ್ಟಿ

300x250 AD

ಕುಮಟಾ: ಪ್ರತಿಯೊಬ್ಬ ದಿವ್ಯಾಂಗರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಂಡು ಸಾಧನೆ ಪಥದಲ್ಲಿ ಸಾಗಿದರೆ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಜನರಲ್ ಇನ್ಸುರೆನ್ಸ್ ಕಂಪೆನಿ ಮತ್ತು ಬೆಂಗಳೂರಿನ ಆಲಿಮ್ಕೋ ಸಂಸ್ಥೆ ಸಹಯೋಗದಲ್ಲಿ ದಾವಣಗೆರೆಯ ಕಾಂಪೋಸಿಟ್ ರಿಜಿನಲ್ ಸೆಂಟರ್(ಸಿ.ಆರ್.ಸಿ) ಹಮ್ಮಿಕೊಂಡ ವಿಕಲಚೇತನರ ಅಗತ್ಯ ಉಪಕರಣ ಸಾಮಗ್ರಿಗಳ ವಿತರಣೆ ಮತ್ತು ಆರೋಗ್ಯ ಶಿಬಿರ ಉದ್ಘಾಟಿಸಿ, ಮಾತನಾಡಿದರು. ವಿಕಲಚೇತನರಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ದಿವ್ಯಾಂಗರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಂಕ್ರಾಂತಿಯ ಈ ಶುಭದಿನದಂದು ದಿವ್ಯಾಂಗರಿಗೆ ಅಗತ್ಯ ಉಪಕರಣಗಳನ್ನು ನೀಡಿರುವ ಸಂಸ್ಥೆಗೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯದ ಜಂಟಿ ನಿರ್ದೇಶಕ ಜಯರಾಮ ಬೊಳ್ಳಾಜೆ ಮಾತನಾಡಿ, ದಿವ್ಯಾಂಗರು ಪರಸ್ಪರ ಸ್ವಾವಲಂಬನೆ ಮತ್ತು ಸಹಕಾರದಿಂದ ಸಜೀವನ ನಡೆಸಬೇಕಾಗಿದ್ದು, ಕೇವಲ ಸರ್ಕಾರದ ಸೌಲಭ್ಯಗಳನ್ನು ನಂಬದೇ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದ ಅವರು, ಅಂಗವೈಕಲ್ಯ ಎಂಬುದು ಶಾಪವಲ್ಲ. ಅದನ್ನು ಮೆಟ್ಟಿ ನಿಂತು ಸಮಾಜದಲ್ಲಿ ಉಳಿದವರಂತೆ ಜೀವನ ನಡೆಸಬೇಕು. ಪ್ಯಾರಾ ಒಲಂಪಿಕ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕವನ್ನು ನಮ್ಮ ದೇಶದ ದಿವ್ಯಾಂಗರು ಪಡೆದು ವಿಶ್ವದಲ್ಲಿ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು.
ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ ಅಂಬಿಗ, ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಭಟ್ಟ, ಆಶ್ರಯ ಫೌಂಡೇಶನ್ ಮುಖ್ಯಸ್ಥ ರಾಜೀವ ಗಾಂವಕರ, ನಿದೇಶಕ ಡಾ.ಉಮಾಶಂಕರ ಮೊಹಂತಿ, ಕಾರ್ಯಕ್ರಮ ಸಂಯೋಜಕ ಇ.ತಮರಾಯಿ ಸೆಲ್ವನ್, ಸಂಸ್ಥೆಯ ವಿರೂಪಾಕ್ಷಪ್ಪ ಪಾಟೀಲ್, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top