ಕಾರವಾರ: ಶಿರವಾಡದಲ್ಲಿ ನೆಲೆಸಿರುವ ಕುಟುಂಬಗಳಿಗೆ ಅತಿಕ್ರಮಣ ಸಕ್ರಮ ಮಾಡುವಂತೆ ಆಗ್ರಹಿಸಿ ಜ.12ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಿಳಿಸಿದೆ.
ಅತಿಕ್ರಮಣ ಸಕ್ರಮದ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರು ಹತ್ತಾರು ವರ್ಷಗಳಿಂದ ಹಲವಾರು ಬಾರಿ ಮನವಿ ಮಾಡಿಕೊಳ್ಳುತ್ತಾ ಬರಲಾಗಿದೆ. ಆದರೆ ಈವರೆಗೂ ಯಾವುದೇ ಸೂಕ್ತ ಪರಿಹಾರ ಕಂಡುಬಾರದಿರುವ ಕಾರಣ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ಅವರ ನೇತೃತ್ವದಲ್ಲಿ ಶಿರವಾಡ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಸೇರಿ ಕುಟುಂಬ ಸಮೇತದೊಂದಿಗೆ ಶಿರವಾಡ ಗ್ರಾಮ ಪಂಚಾಯತಿಯಿಂದ ಬಂಗಾರಪ್ಪನಗರ ನೇರ ರಸ್ತೆ ಮುಖಾಂತರ ಗೀತಾಂಜಲಿ ಟಾಕೀಸ್, ಹೂವಿನ ಚೌಕ, ಸವಿತಾ ಹೋಟೆಲ್, ಸುಭಾಶ್ಚಂದ್ರ ಬೋಸ್ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಪಾದಯಾತ್ರೆ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ