ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ- ನಂದಿಗದ್ದಾ ಲೋಕೋಪಯೋಗಿ ಇಲಾಕೆಯ ರಸ್ತೆ ತೀರಾ ಹಾಳಾಗಿದ್ದು, ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಕೆಗೆ ಸ್ಥಳೀಯರು ತಿಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಕೆ ಎಇಇ ವಿಜಯಕುಮಾರ್ ನಂದಿಗದ್ದಾ- ಯರಮುಖ ರಸ್ತೆ ಕೆಲಸ ಸದ್ಯದಲ್ಲೇ ಪ್ರಾರಂಭಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಹಾಳಾದ ರಸ್ತೆಯಿಂದ ವಾಹನಗಳ ಅಪಫಾತಗಳು ಹೆಚ್ಚಾಗುತ್ತಿದ್ದು, ಕೂಡಲೇ ಸರಿಪಡಿಸಿ ಜನರಿಗೆ ಲೋಕೋಪಯೋಗಿ ಇಲಾಖೆ ಅನುಕೂಲ ಮಾಡಿಕೊಡಬೇಕಿದೆ.
ನಂದಿಗದ್ದೆ – ಯರಮುಖ ರಸ್ತೆ ತುಂಬಾ ಹಾಳಾಗಿದ್ದು, ಜನರ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಒಂದು ವಾಹನ ಸಂಚರಿಸಿದರೆ ಸಾಕು ದೂಳು ತುಂಬಿ ವಾಹನ ಸವಾರರಿಗೆ ರಸ್ತೆ ಕಾಣದಂತಾಗುತ್ತದೆ, ಲೋಕೋಪಯೋಗಿ ಇಲಾಕೆ ಕೂಡಲೇ ರಸ್ತೆ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದು ಯರಮುಖದ ನಿವಾಸಿ ನಾರಾಯಣ ದಬ್ಗಾರ ಆಗ್ರಹಿಸಿದ್ದಾರೆ.