ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ರಥ ವಾಹನ ಸಂಚಾರಕ್ಕೆ ಸೋಮವಾರ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ ಝೂ ವೃತ್ತದಲ್ಲಿರುವ ಕಾಗೇರಿ ಅವರ ಅಭಿನಂದನಾ ಸಮಿತಿಯ ಕಾರ್ಯಾಲಯದ ಎದುರು ರಥದ ಸಂಚಾರಕ್ಕೆ ಅಭಿನಂದನಾ ಸಮಿತಿಯ ಪ್ರಮುಖರು ಹಸಿರು ನಿಶಾನೆ ತೋರಿಸಿದರು. ಜ.15ರಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಗರದ ಮಾರಿಕಾಂಬಾ ಕಾಲೇಜು ಆವಾರದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆಮೂಲೆಗೆ ಆಮಂತ್ರಣ ರಥ ತೆರಳಿ ಆಹ್ವಾನಿಸಲಿದೆ. ಶಿರಸಿಯಿಂದ ಸಿದ್ದಾಪುರಕ್ಕೆ ರಥ ವಾಹನ ತೆರಳಲಿದ್ದು ಅಲ್ಲಿಂದ ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಅಂಕೋಲಾ, ಜೊಯಿಡಾ, ಯಲ್ಲಾಪುರ, ಮುಂಡಗೋಡ, ಹಳಿಯಾಳ ಮುಂತಾದೆಡೆ ತೆರಳಿ ಆಮಂತ್ರಿಸಲಿದೆ ಎಂದು ಅಭಿನಂದನಾ ಸಮಿತಿ ಸಂಚಾಲಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿಯ ಡಾ.ವೆಂಕಟೇಶ ನಾಯ್ಕ, ಗಣಪತಿ ಭಟ್ಟ, ಡಾ.ದಿನೇಶ ಹೆಗಡೆ, ಸದಾನಂದ ಭಟ್ಟ, ರವಿ ಹೆಗಡೆ ಹೂವಿನಮನೆ, ಆರ್.ವಿ.ಹೆಗಡೆ ಚಿಪಗಿ, ಆರ್.ಡಿ.ಹೆಗಡೆ, ಮೋಹನದಾಸ್ ನಾಯಕ, ಜಿ.ಎ.ಹೆಗಡೆ ಕಾಗೇರಿ ಮುಂತಾದವರಿದ್ದರು.