Slide
Slide
Slide
previous arrow
next arrow

ನಗರ ಸೌಂದರ್ಯಕ್ಕೆ ಬೀದಿ ಬದಿ ವ್ಯಾಪಾರಸ್ಥರು ಸಹಕರಿಸಿ: ಶಾಸಕಿ ರೂಪಾಲಿ ನಾಯ್ಕ

300x250 AD

ಕಾರವಾರ: ನಗರ ಸೌಂದರ್ಯಕ್ಕೆ ಬೀದಿ ಬದಿ ವ್ಯಾಪರಸ್ಥರು ಒಂದೇ ಕಡೆ ಕುಳಿತು ಸಹಕರಿಸಬೇಕು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ನಡೆದ ಬೀದಿ ಬದಿ ವ್ಯಾಪರಸ್ಥರಿಗೆ ಕಾರ್ಡ್ ವಿತರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪರಸ್ಥರು ಒಂದೇ ಕಡೆ ಕುಳಿತು ವ್ಯಾಪಾರ ಮಾಡಲು ಮಾರುಕಟ್ಟೆ ನಿರ್ಮಿಸಿ ಕೊಡಲಾಗಿದೆ. ಅಷ್ಟಾದರು ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ನಿಮಗಾಗಿ ನಿರ್ಮಿಸಿದ ಮಾರುಕಟ್ಟೆಯಲ್ಲಿಯೇ ಕುಳಿತು ವ್ಯಾಪಾರ ಮಾಡಿ ನಗರ ಸೌಂದರ್ಯಕ್ಕೆ ಸಹಕರಿಸಿ ಎಂದರು.
ನಗರಸಭೆ ವತಿಯಿಂದ ಹೂವು ಹಣ್ಣು ಮಾರುಕಟ್ಟೆಯನ್ನ ನಿರ್ಮಿಸಲಾಗಿದೆ. ಈಗಿ ನಿರ್ಮಿಸಿರುವ ಮಾರುಕಟ್ಟೆ ಜಾಗದ ಮೌಲ್ಯ ಸುಮಾರು 9 ಕೋಟಿ ಇದ್ದು ಹಲವರ ಕಣ್ಣು ಈ ಜಾಗದ ಮೇಲೆ ಇದ್ದರು ಹೂವು ಹಣ್ಣು ವ್ಯಾಪಾರಿಗಳಿಗೆ ಅನುಕೂಲ ಆಗಲಿ ಎಂದು ಅಲ್ಲೇ ಮಾರುಕಟ್ಟೆ ನಿರ್ಮಿಸಿ ಕೊಡಲಾಗಿದೆ. ಎಲ್ಲರೂ ಒಂದೇ ಕಡೆ ಕುಳಿತು ವ್ಯಾಪಾರ ಮಾಡಿದರೆ ಜನರು ಅಲ್ಲಿಯೇ ಬಂದು ಖರೀದಿ ಮಾಡುತ್ತಾರೆ ಎಂದರು.
ಬೀದಿ ಬದಿ ವ್ಯಾಪಾರಸ್ಥರ ಪರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವಿದೆ. ಬೀದಿ ಬದಿ ವ್ಯಾಪರಸ್ಥರಿಗೆ ವ್ಯಾಪರ ಮಾಡಲು ಸಹಾಯವಾಗಲಿ ಎಂದು 10 ಸಾವಿರ ಸಾಲ ನೀಡುತ್ತಿದ್ದು ಕಾರವಾರದಲ್ಲಿ ಸುಮಾರು 600 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸರ್ಕಾರ ನೀಡಿದ ಸೌಲಭ್ಯ ಬಳಸಿ ವ್ಯಾಪರ ವೃದ್ದಿ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು. ನಾನು ಎಲ್ಲಾ ಸಂಧರ್ಭದಲ್ಲಿಯೂ ಬಡವರ ಪರ ನಿಲ್ಲುತ್ತೇನೆ ಎಂದರು.
ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ ಮಾತನಾಡಿ ಬೀದಿ ಬದಿ ವ್ಯಾಪರಸ್ಥರು ಪ್ರತಿಭಟನೆ ಮಾಡುವುದು ಸಲ್ಲ. ನಿಮಗೆ ಏನು ಬೇಕು ಮನವಿ ಮಾಡಿಕೊಂಡರೇ ನಗರಸಭೆಯಿಂದ ಸಹಾಯ ಮಾಡುವ ಕೆಲಸ ಮಾಡುತ್ತೇವೆ. ಪ್ರತಿಭಟನೆ ಮಾಡುವುದು ಎಲ್ಲದಕ್ಕೂ ಉತ್ತರವಲ್ಲ ಎಂದರು.
ಶಾಸಕಿ ರೂಪಾಲಿ ನಾಯ್ಕ ಬೀದಿ ಬದಿ ವ್ಯಾಪಾರಸ್ಥರ ಕಷ್ಟಕ್ಕೆ ಸ್ಪಂದಿಸಿ ಮಾರುಕಟ್ಟೆ ನಿರ್ಮಿಸಿ ಕೊಟ್ಟಿದ್ದಾರೆ.
ಒಂದೇ ಕಡೆ ಕುಳಿತು ವ್ಯಾಪಾರ ಮಾಡಲು ಜಾಗ ಮಾಡಿಕೊಟ್ಟಿದ್ದೇವೆ. ಆದರೂ ಹೊರಗೆ ಕುಳಿತು ವ್ಯಾಪಾರ ಮಾಡುತ್ತೇವೆ, ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತೇವೆ ಎಂದರೆ ಒಳ್ಳೆಯ ಬೆಳವಣಿಗೆಯಲ್ಲ. ಯಾರು ಇಂತಹ ಕೃತ್ಯ ಮಾಡುತ್ತಾರೋ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಊರಿನ ಸ್ಚಚ್ಚತೆಗೆ ಬೀದಿ ಬದಿ ವ್ಯಾಪಾರಸ್ಥರು ಆದ್ಯತೆ ಕೊಡಲಿ. ಅಂಗಡಿ ಕಾರರಿಂದ ನಗರಸಭೆಗೆ ಲಾಭವಿದೆ. ಆದರೆ ಬೀದಿ ಬದಿ ವ್ಯಾಪಾರಿಗಳಿಂದ ಯಾವುದೇ ಲಾಭ ಪಡೆಯದಿದ್ದರು ಅವರ ಪರ ಕೆಲಸ ಮಾಡುತ್ತೇವೆ. ನಗರಸಭೆಯಿಂದ ನೀಡಿರುವ ಗುರುತಿನ ಚೀಟಿಯನ್ನ ಬೇರೆಯವರಿಗೆ ವರ್ಗಾವಣೆ ಮಾಡುವುದು, ಬೇರೆಯವರಿಂದ ವ್ಯಾಪಾರ ಮಾಡುವುದಕ್ಕೆ ಅವಕಾಶ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಆರ್ ಪಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ನಗರಸಭೆ ಸದಸ್ಯರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top