ಕಾರವಾರ: ಕಾರವಾರೇತರ ವ್ಯಕ್ತಿಗಳು ನಗರದ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಫುಟ್‌ಪಾತ್ ಮೇಲೆ ಸಂಚರಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಜನರು ನಡೆದು ಹೋಗುವ ಪರಿಸ್ಥಿತಿಯಿದ್ದು, ಇದರಿಂದಾಗಿ ವಾಹನಗಳ ಭಯ ಕಾಡುತ್ತಿದ್ದು ಇದನ್ನ ಸರಿಪಡಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಶನಿವಾರ ಮನವಿ ನೀಡಲಾಯಿತು.
ಈಗಾಗಲೇ ಹೂವು ಹಣ್ಣು ವ್ಯಾಪಾರಿಗಳಿಗೆ ನಗರಸಭೆಯ ವತಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿದರೂ ಅದನ್ನು ಬಿಟ್ಟು, ರಸ್ತೆ ಬದಿಯಲ್ಲಿ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದು, ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೂ ಕಿರಿಕಿರಿ ಆಗುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಸೂಚನೆ ನೀಡಲು ಹೋದ ನಗರಸಭೆಯ ಸಿಬ್ಬಂದಿಗಳ ಮೇಲೆಯೇ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಸ್ಥಳೀಯರಲ್ಲದ ವ್ಯಾಪಾರಿಗಳು ಹೊರಗಿನಿಂದ ಬಂದು ನಗರಾಡಳಿತಕ್ಕೇ ಸವಾಲು ಹಾಕುವುದು, ಅಲ್ಲದೇ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ನೋಡಿದರೆ ಇವರದ ಅತಿರೇಕ ಎನಿಸುತ್ತದೆ. ನಮ್ಮ ಸಂಘಟನೆಯು ಇವರ ನಡೆ ವಿರುದ್ಧ ಖಂಡಿಸುತ್ತೇವೆ. ಇಂತಹುದಕ್ಕೆ ಅವಕಾಶ ಕೊಡದೇ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಿ ಹೊರಗಿನ ವ್ಯಾಪಾರಿಗಳಿಗೆ ಫುಟ್‌ಪಾತ್ ಮೇಲೆ ವ್ಯಾಪಾರಕ್ಕೆ ಅವಕಾಶ ನೀಡದೇ ಅವರಿಗೆ ನಿಗದಿಸಿ ಸ್ಥಳದಲ್ಲೇ ವ್ಯಾಪಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಸಾರ್ವಜನಿಕ ಸಂಚಾರಕ್ಕೆ ಫುಟ್‌ಫಾತ್ ಮುಕ್ತ ಮಾಡಬೇಕೆಂದು. ಒಂದು ವೇಳೆ ಇದೇ ರೀತಿ ಪುಟ್ ಪಾತ್ ಮೇಲೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡಿದರೆ ನಮ್ಮ ಸಂಘಟನೆ ವತಿಯಿಂದ ನಗರಸಭೆ ಎದ್ದರು ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ್ ಜಿ.ಅರ್ಗೇಕರ್ ಪ್ರಮುಖರಾದ ರೋಷನ್ ಹರಿಕಂತ್ರ, ಗೋಪಾಲ ಗೌಡ, ರಾಜೇಶ್ ಹರಿಕಂತ್ರ, ಸಮೀರ್ ಶೆಜ್ವಡ್ಕರ್, ಮೋಹನ್ ಉಳೇಕರ್, ಸುದೇಶ್ ನಾಯ್ಕ, ರಾಮಕಾಂತ್ ನಾಯ್ಕ. ಸುನಿಲ್ ತಾಂಡಲ್, ವಿನಯ್ ನಾಯ್ಕ್, ವಿಶಾಲ್ ಇನ್ನು ಹಲವಾರು ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.