Slide
Slide
Slide
previous arrow
next arrow

ಜ.11ಕ್ಕೆ ಪಿಂಚಣಿ ಅದಾಲತ್

300x250 AD

ಕಾರವಾರ: ಇಪಿಎಸ್ 1995 ಪಿಂಚಣಿದಾರರು ಇಪಿಎಸ್ 1995 ನಿಬಂಧನೆಗಳ ಕುರಿತಾಗಿ ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್‌ಓ ವತಿಯಿಂದ ಪಿಂಚಣಿ ಅದಾಲತನ್ನು ಜ.11ರಂದು ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಭವಿಷ್ಯ ನಿಧಿ ಭವನ, ನ್ಯೂ ಬ್ಲಾಕ್ ನಂ.10, ಆದಾಯ ತೆರಿಗೆ ಇಲಾಖೆ ಹತ್ತಿರ, ನವನಗರ, ಹುಬ್ಬಳ್ಳಿ ಕಛೇರಿಯಲ್ಲಿ ಆಯೋಜಿಸಲಾಗಿದೆ.
ಆಸಕ್ತ ಪಿಂಚಣಿದಾರರು ತಮ್ಮ ಪಿಂಚಣಿ ಸಂಬoಧಿತ ಸಮಸ್ಯೆಗಳನ್ನು ಹಾಗೂ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು. ಇ-ಮೇಲ್: ro.hubli@epfindia.gov.in ಮೂಲಕವು ಪಿಂಚಣಿಗೆ ಸಂಬAಧಿಸಿದ ದಾಖಲೆಗಳೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಪಿಂಚಣಿ ಅದಾಲತ್ ವಿವರಗಳು ಫೇಸಬುಕ್ (EPFO HUBLI), ಟ್ವಿಟರ್ (@epfohubli) ಮತ್ತು ವಾಟ್ಸಾಪ್ ಸಂ: 8762525754 ನಲ್ಲಿಯೂ ಲಭ್ಯವಿರುತ್ತದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top