ಕಾನಸೂರು: ಶ್ರೀ ಕ್ಷೇತ್ರ ಸಿಗಂದೂರು ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜನವರಿ 6 ರಂದು ಕಾನಸೂರಿನ ಮಾದನಕಳ್’ದಲ್ಲಿ ಕೂಡಾಟ ಮತ್ತು ಜೋಡಾಟ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಬೈಲಹೊಂಗಲ ಡಿವೈಎಸ್ಪಿ ರವಿ ಡಿ.ನಾಯ್ಕ ಉದ್ಘಾಟಿಸಲಿದ್ದಾರೆ. ಕಾನಸೂರು ಗ್ರಾಪಂ ಅಧ್ಯಕ್ಷ ವೀರಭದ್ರ ಜಂಗಣ್ಣನವರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರವಿಕುಮಾರ್, ಉದ್ಯಮಿ ಆರ್.ಜಿ. ಶೇಟ್, ಗ್ರಾಪಂ ಸದಸ್ಯ ಶಶಿಕಾಂತ ನಾಮಧಾರಿ, ನಿವೃತ್ತ ಶಿಕ್ಷಕ ಕೆ.ಆರ್. ಹೆಗಡೆ, ಸಿರ್ಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಗ್ರಾಪಂ ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ ಹಾಗೂ ನಿಕಟಪೂರ್ವ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲ ಹೆಗಡೆ ಗೋಳಿಕೊಪ್ಪ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಯಕ್ಷಗಾನ ಕಲಾವಿದ ವಿದ್ಯಾಧರ ಜಳವಳ್ಳಿ, ರಘುಪತಿ ನಾಯ್ಕ್ ಹೆಗ್ಗರಣಿ, ಅತ್ಯುತ್ತಮ ಭಾಣಸಿಗ ರಘುನಂದನ್ ಭಟ್ ಶಿರಳಗಿ, ರೇಖಾ ಹೆಗಡೆ ತುಂಬೆಬೀಡು, ಶಿಕ್ಷಕ ಮನೋಹರ್ ದುಂಡಸಿ, ಗುತ್ತಿಗೆದಾರ ಮುತ್ತುಸ್ವಾಮಿ, ವೈದ್ಯ ಡಾಕ್ಟರ್ ವಿಕ್ರಂ ಶೆಟ್ಟಿ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪಶಸ್ತಿ ಪುರಸ್ಕೃತ ಕುಮಾರಿ ಕೌಶಲ್ಯ ಹೆಗಡೆ ಹಾಗೂ ಕುಶ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ವೆಂಕಟರಮಣ ಹೆಗಡೆ ತಿಳಿಸಿದ್ದಾರೆ.