ಶಿರಸಿ: ವಕೀಲರ ರಾಷ್ಟ್ರಮಟ್ಟದ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಹರಿಯಾಣದ ಕುರುಕ್ಷೇತ್ರದಲ್ಲಿ ಡಿಸೆಂಬರ್ 26 ರಿಂದ 28 ರವರೆಗೆ ಸಂಘಟಿಸಿರುವ ವಕೀಲರ 16ನೇ ರಾಷ್ಟ್ರೀಯ ಅಧಿವೇಶನದಲ್ಲಿ ಜಿಲ್ಲೆಯ ಮೂವರು ವಕೀಲರು ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ.
ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷರಾದ ಸಂತೋಷ ಹೆಗಡೆ, ಪ್ರಧಾನ ಕಾರ್ಯದರ್ಶಿ ಸತೀಶ ಜಿ. ನಾಯ್ಕ ಔಡಾಳ, ಯಲ್ಲಾಪುರದ ಗೋಪಾಲ ಭಾಗ್ವತ ಅಧಿವೇಶನದಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಲಿದ್ದಾರೆ.
“75 ವರ್ಷದ ಪುನರುಜ್ಜೀವಿತ ಭಾರತ- ಬದಲಾಗುತ್ತಿರುವ ಕಾನೂನು ಮತ್ತು ನ್ಯಾಯದ ರೂಪರೇಖೆ” (75 years Resurgent Bharat -Changing Contours of Law and Justice) ಎಂಬ ವಿಷಯ ವಸ್ತುವಿನ ಮೇಲೆ ನಡೆಯುವ ಅಧಿವೇಶನದ ಮುಖ್ಯ ಅತಿಥಿಗಳಾಗಿ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯಕಾಂತ ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ಮಧ್ಯ ಪ್ರದೇಶ ಹೈಕೋರ್ಟ್ ನ್ಯಾಯಧೀಶರಾದ ನ್ಯಾಯಮೂರ್ತಿ ಗುರ್ಪಾಲ ಸಿಂಗ್ ಅಹ್ಲುವಾಲಿಯ, ದೆಹಲಿ ಹೈಕೋರ್ಟನ ನ್ಯಾಯಧೀಶ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ, ಹರಿಯಾಣದ ಮಹಾ ನ್ಯಾಯವಾದಿ ಬಲದೇವ್ ರಾಜ್ ಮಹಾಜನ್, ಹರಿಯಾಣ ಕಾನೂನು ಆಯೋಗದ ಗೌರವಾನ್ವಿತ ಸದಸ್ಯರಾದ ಮುಖೇಶ ಗರ್ಗ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಕೆ. ಶ್ರೀನಿವಾಸ ಮೂರ್ತಿ ವಹಿಸಲಿದ್ದಾರೆ.