ಜೊಯಿಡಾ: ಉತ್ತರಕನ್ನಡ ಜಿಲ್ಲೆ ಇಬ್ಭಾಗವಾದಲ್ಲಿ ಜೊಯಿಡಾ ತಾಲೂಕನ್ನು ಕಾರವಾರ ಜಿಲ್ಲೆಗೆ ಸೇರಿಸಬೇಕು ಎಂದು ಕಾಳಿ ಬ್ರಿಗೇಡ್ ಸಂಘಟನೆಯಿoದ ಸಭೆ ನಡೆಯಿತು.
ನೂತನ ಶಿರಸಿ ಜಿಲ್ಲೆಯ ಯೋಜನೆಯಲ್ಲಿ ಜೊಯಿಡಾ ತಾಲ್ಲೂಕು ಸೇರಿಸಿದ್ದನ್ನು ವಿರೋಧಿಸಿ, ಈಗಿರುವಂತೆ ಕಾರವಾರ ಜಿಲ್ಲಾ ಕೇಂದ್ರ ಮುಂದುವರಿಯುವoತೆ ಸರಕಾರವನ್ನು ಆಗ್ರಹಿಸಲು ಜ.6ರಂದು ಜೊಯಿಡಾದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.
ಈ ಪ್ರತಿಭಟನೆ ಪಕ್ಷಾತೀತವಾಗಿ ಮಾಡಲಾಗುವುದು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಎಲ್ಲ ಸಂಘ- ಸಂಸ್ಥೆಗಳು, ಎಲ್ಲಾ ಜಾತಿ- ಧಾರ್ಮಿಕ, ಸಾಮಾಜಿಕ ಸಂಘಟನೆಗಳು, ಎಲ್ಲಾ ಗ್ರಾಮ ಪಂಚಾಯತಗಳು, ಎಲ್ಲಾ ಸಾರ್ವಜನಿಕರ ಸಹಾಯ ಪಡೆದು ಹೋರಾಟ ಮಾಡುವ ಬಗ್ಗೆ ಠರಾವ ಮಾಡಲಾಯಿತು. ವ್ಯಾಪಾರಿಗಳನ್ನು ಸ್ವಯಂಪ್ರೇರಿತವಾಗಿ ತಮ್ಮ ವ್ಯಾಪಾರ ಸ್ವಲ್ಪ ಸಮಯ ಬಂದ್ ಇಟ್ಟು ಬೆಂಬಲ ನೀಡಬೇಕೆಂದು ವಿನಂತಿಸುವ ಬಗ್ಗೆ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಮುಖ್ಯ ಸಂಚಾಲಕ ರವಿ ರೇಡಕರ್, ಅಧ್ಯಕ್ಷ ಸತೀಶ್ ನಾಯಕ್, ವಕೀಲ ಸುನೀಲ್ ದೇಸಾಯಿ, ನಾರಾಯಣ ಹೆಬ್ಬಾರ, ಅಜಿತ್ ಟೆಂಗ್ಸೆ, ಉಮೇಶ್ ವೇಳಿಪ್, ಪ್ರಭಾಕರ, ಸಿಮಾಂವ ವೇಗಸ್, ಸಮಿರ, ಸಂಧ್ಯಾ, ನರಹರಿ ಇದ್ದರು.