ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ನಡೆಸಿದ ಕಲೋತ್ಸವ ಸ್ಪರ್ಧೆ 2022-23 ರ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ವಿಭಾಗದಲ್ಲಿ ನಗರದ ನರೇಬೈಲ ಚಂದನ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಥಮ ಉಮೇಶ ನಾಯ್ಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಈತನ ಸಾಧನೆಗೆ ಶಾಲಾ ಸರ್ವಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಈತನು ಭಾರತಿ ನಾಯ್ಕ ಮತ್ತು ಉಮೇಶ ನಾಯ್ಕ ದಂಪತಿಗಳ ಮಗನಾಗಿದ್ದು ಶಾರದಾ ಸಂಗೀತ ಶಾಲೆ ಗಾಂಧಿನಗರ, ಶಿರಸಿ ಇದರ ಗುರುಗಳಾದ ವಿದೂಷಿ ಶ್ರೀಮತಿ ವತ್ಸಲಾ ಮಾಪಾರಿ ಮತ್ತು ಶ್ರೀ ವಿಠ್ಠಲದಾಸ ಕಾಣೇಕರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾನೆ.