Slide
Slide
Slide
previous arrow
next arrow

ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಛಾಂಪಿಯನ್‌ಷಿಪ್‌: ರಜತ ಹಾಗೂ ಕಂಚಿನ ಪದಕ ಬಾಚಿದ ಖುಷಿ ಸಾಲೇರ್

300x250 AD

ಶಿರಸಿ: ನಗರದ ಲಯನ್ಸ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕುಮಾರಿ ಖುಷಿ ಸಾಲೇರ್ ಇತ್ತೀಚಿಗೆ ಬೆಂಗಳೂರಿನಲ್ಲಿ ಭಾರತೀಯ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಯೋಜಿಸಿದ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಛಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಜ್ಯೂನಿಯರ್ ಬಾಲಕಿಯರ ವಿಭಾಗದ ರಜತ ಹಾಗೂ ಮಿಕ್ಷೆಡ್ ವಿಭಾಗದ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.
ಪುಟ್ಟ ಬಾಲಕಿಯ ಈ ಅಪೂರ್ವ ಸಾಧನೆಗೆ ಪ್ರೋತ್ಸಾಹಿಸಿದ ಆಕೆಯ ಪಾಲಕರು ಹಾಗೂ ಕುಟುಂಬದವರನ್ನು, ಹಾಗೂ ಕಳೆದ ಒಂದು ವರ್ಷದಿಂದ ಈ ಸಾಧನೆಗೆ ಸತತ ತರಬೇತಿ ನೀಡಿದ ತರಬೇತುದಾರ ದಿಲೀಪ ಹಂಬರ್ ಅವರನ್ನು ಹಾಗೂ ವಿಜೇತ ವಿದ್ಯಾರ್ಥಿಯನ್ನು ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಲಯನ್ಸ ಶಾಲಾ ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top